Breaking News

ಲಾಡ್ಜ್‌ ನಲ್ಲಿ ನೇಣಿಗೆ ಶರಣಾದ ಯುವಕ-ಯುವತಿ:

Spread the love

ಧಾರವಾಡ: (Suicide Case) ಲಾಡ್ಜ್‌ನಲ್ಲಿ ಯುವ ಜೋಡಿಯೊಂದು ಒಂದೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದದ ಪಟ್ಟಣದ ಲಾಡ್ಜ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ. ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ವೊಂದರ ಫ್ಯಾನಿಗೆ ಜೋಡಿಯಾಗಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಇವರನ್ನು ಕುಮಾರ ತಳವಾರ ಹಾಗೂ ದೀಪಾ ಎಂದು ಹೇಳಲಾಗುತ್ತಿದೆ.

 

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಶೋಕ ಲಾಡ್ಜ್‌ನಲ್ಲಿ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡಿದ (Suicide Case) ಇವರನ್ನು ಆರಂಭದಲ್ಲಿ ಎಲ್ಲರೂ ಪ್ರೇಮಿಗಳೇ ಇರಬಹುದೆಂದು ಭಾವಿಸಿದ್ದರು. ಆದರೆ ಆ ಬಳಿಕ ಬಯಲಾದ ಅಚ್ಚರಿಯ ಸಂಗತಿ ಅಂದ್ರೆ ಸಂಬಂಧದಲ್ಲಿ ಇವರಿಬ್ಬರು ಅಣ್ಣ-ತಂಗಿ ಎಂದು ಸಂಬಂಧಿಕರೆ ಹೇಳಿಕೊಂಡಿದ್ದಾರೆ.

ಜೋಡಿಯಾಗಿಯೇ ನೇಣಿಗೆ ಶರಣಾಗಿರೋ ಇವರು ರಕ್ತ ಸಂಬಂಧದಲ್ಲಿ ಅಕ್ಕ ತಂಗಿಯರ ಮಕ್ಕಳು.ಹೀಗಾಗಿ ಇವರಿಬ್ಬರ ಆತ್ಮಹತ್ಯೆ ಅನೇಕ ಸಂಶಯಗಳಿಗೆ ಕಾರಣವಾಗಿದೆ. ಇಬ್ಬರ ಮಧ್ಯೆ ಅಣ್ಣ ತಂಗಿ ಸಂಬಂಧವನ್ನು ಮೀರುವ ಪ್ರೀತಿ ಉಂಟಾಗಿದ್ದು, ಅದೇ ಕಾರಣಕ್ಕೆ ಈ ರೀತಿಯಾಗಿ ಮಾಡಿಕೊಂಡಿರುವುದು ಸರಿಯಲ್ಲ ಅನ್ನೋ ಭಾವನೆ ಸಂಬಂಧಿಕರದ್ದು.

22 ವಯಸ್ಸಿನ ಕುಮಾರ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದವನು. ದೀಪಾ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಯುವತಿ. ಇಬ್ಬರ ತಾಯಿಯಂದಿರೂ ಅಕ್ಕತಂಗಿಯರು‌. ಹೀಗಾಗಿ ಕುಮಾರ ಮತ್ತು ದೀಪಾ‌ ಜೋಡಿಯಾಗಿ ಓಡಾಡುವಾಗ ಇವರ ಸಂಬಂಧದ ಬಗ್ಗೆ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಇನ್ನು ಧಾರವಾಡಲ್ಲಿ ಕೆಲಸ ಹಿಡಿತೇನಿ. ಕಂಪನಿಯೊಂದರಲ್ಲಿ ಕೆಲಸ ಸಿಗೋದು ಇದೇ ಇದೆ ಅಂತಾ ಹೇಳಿಕೊಂಡು ಆಗಾಗ ನೀರಲಕಟ್ಟಿಯ ಚಿಕ್ಕಮ್ಮನ ಮನೆಗೆ ಬರುತ್ತಿದ್ದ ಕುಮಾರ ತಿಂಗಳಾನುಗಟ್ಟಲೇ ಚಿಕ್ಕಮ್ಮನ ಮನೆಯಲ್ಲಿಯೇ ಉಳಿದು ಬಿಡುತ್ತಿದ್ದಂತೆ.

ಡಿಸೆಂಬರ್ 5ರಂದು ಕುಮಾರ, ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ ಹೋಗುತ್ತೇನೆ ಅಂತಾ ತನ್ನ ಮನೆಯಲ್ಲಿ ಹೇಳಿ ಹೋಗಿದ್ದಾನೆ. ಅತ್ತ ಪಿಯುಸಿ ಓದುತ್ತಿರೋ ದೀಪಾ, ಡಿ. 5ರಂದು ಕಾಲೇಜ್‌ಗೆ ಹೋದವಳು ಮನೆಗೆ ವಾಪಸ್ ಬಂದಿರಲೇ‌ ಇಲ್ಲ. ಅಣ್ಣ ತಂಗಿ ಇಬ್ಬರು ಸೇರಿ ಊರಿಗೆ ಹೋಗಿರಬಹುದು ಎಂದುಕೊಂಡು ಮನೆಯವರೆಲ್ಲ ಸುಮ್ಮನಾಗಿ ಬಿಟ್ಟಿದ್ದಾರೆ. ಆದ್ರೆ ಇವರು ಅದೇ ಡಿ. 5ರಂದು ಅಶೋಕ ಲಾಡ್ಜ್ ನ ರೂಮಿನೊಳಗೆ ಸೇರಿಕೊಂಡವರು ಹೊರಗೆ ಬಂದೇ ಇಲ್ಲ. ಇಡೀ ದಿನ ರೂಮ್‌ ಬಾಗಿಲು ತೆಗೆಯಲಿಲ್ಲ ಎಂದು ಸಂಶಯ ಪಟ್ಟ ಲಾಡ್ಜ್‌ ನ ಸಿಬ್ಬಂದಿಗಳು, ಬಾಗಿಲು ತೆರದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬಹಿರಂಗಗೊಂಡಿದೆ.

 


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ