Breaking News

B.J.P.ಕುತಂತ್ರಕ್ಕೆ ಹೆದರುವ ಮಗ ನಾನಲ್ಲ – DK ಶಿವಕುಮಾರ್ ಘರ್ಜನೆ

Spread the love

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮನೆ ಮೇಲೆ CBI ಅಧಿಕಾರಿಗಳು ದಾಳೆ ನಡೆಸಿದ ಬಳಿಕ ಹೊರಬಂದ ಶಿವಕುಮಾರ್​ ರೇಡ್​ ಬಗ್ಗೆ ಮಾತನಾಡಿದರು. ಸದಾಶಿವನಗರದಲ್ಲಿರುವ ತಮ್ಮ ನಿವಾಸಿದಿಂದ ಹೊರಬಂದ ಶಿವಕುಮಾರ್ ರೇಡ್​ ಬಗ್ಗೆ ಪ್ರತಿಕ್ರಿಯಿಸಿದರು.

ನಿಮ್ಮ ಅಭಿಮಾನ, ಪ್ರೀತಿ ಮರೆಯಲು ಸಾಧ್ಯವಿಲ್ಲ. ಇಡೀ ದೇಶದ ಜನರು ನೋಡುತ್ತಿದ್ದಾರೆ. ಬೆಳಗ್ಗೆಯಿಂದ ಮನೆ ಮುಂದೆ ಅಥವಾ ರಸ್ತೆ ಇರಬಹುದು, ರಾಜ್ಯದಲ್ಲಿ, ಹೊರಗಡೆ ನನಗಾಗಿ ಮತ್ತು ಪಕ್ಷಕ್ಕೆ ಪ್ರೀತಿ ಅಭಿಮಾನ ತೋರಿಸಿದ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಹೇಳಿದರು.

ಪಕ್ಷ ಮತ್ತು ನಿಮಗೆ ಕಳಂಕ ತರುವಂಥ ಕೆಲಸ ನಿಮ್ಮ ಡಿಕೆಶಿ ಕುಟುಂಬ ಮಾಡಿಲ್ಲ. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಇಡಿ ಕೇಸ್​ ಹಾಕಿ ನನ್ನ ಜೈಲಿಗೆ ಕಳುಹಿಸಿದ್ದರು. ಇದೀಗ, 2020ರಲ್ಲಿ ಮತ್ತೆ ದಾಳಿ ನಡೆಸಿದ್ದಾರೆ ಎಂದು ಹೇಳಿದರು.

‘ಇದು ಸಿಬಿಐ ಕೇಸ್​ ಅಲ್ಲ, ಆರ್ಥಿಕ ಅಪರಾಧ ಕೇಸ್’
ಪಾಪ ರಾಜ್ಯದ ಮುಖ್ಯಮಂತ್ರಿ AG ಹೇಳಿದರೂ ಕೇಳಲಿಲ್ಲ. ಇದು ಸಿಬಿಐ ಕೇಸ್​ ಅಲ್ಲ, ಆರ್ಥಿಕ ಅಪರಾಧ ಕೇಸ್. ಹೀಗೆಂದು ಹೇಳಿದರೂ ಈ ರಾಜ್ಯದ ಮುಖ್ಯಮಂತ್ರಿ ಸಿಬಿಐಗೆ ಪರ್ಮಿಷನ್​ ನೀಡಿದ್ದಾರೆ. ಆದರೆ, 30 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಿಮ್ಮ ಕಾರ್ಯಕರ್ತ, ಶಾಸಕ, ಸಚಿವ, ಅಧ್ಯಕ್ಷನಾಗಿ ತಪ್ಪೆಸಗಿಲ್ಲ ಎಂದು ಶಿವಕುಮಾರ್​ ಹೇಳಿದರು.

ನಾನು ತಪ್ಪು ಮಾಡಿದ್ದರೆ ಮಾತ್ರ ಹೆದರಿಕೊಳ್ಳಬೇಕು. ಸರ್ಕಾರ ಹೇಳಿದಂಗೆ ಅಧಿಕಾರಿಗಳು ಕೇಳಬೇಕು. ಪ್ಯಾಂಟ್​, ಪಂಚೆ, ಸೀರೆ ಸೇರಿ ಎಲ್ಲಾ ಲೆಕ್ಕ ತೆಗೆದುಕೊಂಡಿದ್ದಾರೆ. ಸಿಬಿಐನವರಿಗೆ ವೃತ್ತಿಪರತೆ ಇದೆ, EDಯವರ ರೀತಿ ಅಲ್ಲ. ಈ ಬೈ ಎಲೆಕ್ಷನ್ ಆಗೋವರೆಗೂ ಈ ಕಾಟ ಇರುತ್ತೆ. ಸಿಬಿಐ ಅಧಿಕಾರಿಗಳು ಸರ್ಕಾರ ಹೇಳಿದಂತೆ ಕೇಳುತ್ತೆ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ. ಈ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ನಾನುಂಟು, ನೀವುಂಟು, ಭಕ್ತವುಂಟು, ಭಗವಂತ ಉಂಟು. ಈ ರೀತಿ ರಾಜಕೀಯವಾಗಿ ತೊಂದರೆ ಕೊಡ್ತಾರಲ್ಲ. ನನ್ನ ಬಾಯಿಯನ್ನ ಮುಚ್ಚಿಸುವ ಪ್ರಯತ್ನ ಯಾರು ಮಾಡ್ತಾರೋ ಇಂತಹವರಿಗೆ ಆ ದೇವರು ಒಳ್ಳೆಯದು ಮಾಡಲಿ ಎಂದು ಶಿವಕುಮಾರ್​ ಹೇಳಿದರು. ಅವರಿಗೆ ಈ ಉಪಚುನಾವಣೆಗಳಲ್ಲಿ ಉತ್ತರ ಕೊಡೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ