Breaking News

ಹುಬ್ಬಳ್ಳಿ – ಬೆಂಗಳೂರು ನಡುವೆ ಓಡಲಿದೆ ವಂದೇ ಭಾರತ ರೈಲು

Spread the love

ಹುಬ್ಬಳ್ಳಿ, ಡಿಸೆಂಬರ್‌, 07: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆಯು ಈಗ ಮತ್ತೊಂದು ಸಾರ್ವಜನಿಕ ಸೇವೆಯೊಂದಿಗೆ ಗುರುತಿಸಿಕೊಳ್ಳಲಿದೆ. ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ – ಬೆಂಗಳೂರು ಮಧ್ಯೆ 2023ರ ಮಾರ್ಚ್‌ನಲ್ಲಿ ಸಂಚಾರ ಪ್ರಾರಂಭಿಸುವ ಸಾಧ್ಯತೆ ಇದ್ದು, ನೈಋತ್ಯ ರೈಲ್ವೆ ವಲಯದಿಂದ ಕೆಲಸ ಭರದಿಂದ ಸಾಗಿದೆ.

 

ಈಗಾಗಲೇ ಚೆನ್ನೈ-ಬೆಂಗಳೂರು ಹಾಗೂ ಮೈಸೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪ್ರಾರಂಭಿಸಿದೆ. ಹುಬ್ಬಳ್ಳಿ – ಬೆಂಗಳೂರು ಮಧ್ಯದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪಲ್ಹಾದ ಜೋಶಿ ಅವರು ಮನವಿ ಮಾಡಿದ್ದು, ಈ ರೈಲು ಧಾರವಾಡದಿಂದ ಸಂಚಾರ ಪಾರಂಭಿಸುವ ಸಾಧ್ಯತೆಯೂ ಇದೆ.

 

ಇನ್ನು ವಂದೇ ಭಾರತ್‌ ರೈಲಿನಲ್ಲಿ ಸಂಚರಿಸುವುದೆಂದರೆ ವಿಮಾನದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ವೇಗ, ಸುರಕ್ಷತೆ ಮತ್ತು ಅತ್ಯಾಧುನಿಕ ಸೇವೆ ಈ ರೈಲಿನಲ್ಲಿ ದೊರೆಯಲಿವೆ. ವಿಮಾನದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಈ ರೈಲಿನಲ್ಲಿ ಸಿಗಲಿವೆ. ಪ್ರತಿ ಸೀಟಿಗೆ ಮೊಬೈಲ್‌ ಚಾರ್ಜರ್, ತಿಂಡಿ ಸವಿಯಲು ಟೇಬಲ್ ಇರಲಿವೆ, ಎಲ್ಲ ಬೋಗಿಗಳಿಗೆ ಆಟೋಮೆಟಿಕ್ ಬಾಗಿಲು, ಪ್ರಯಾಣಿಕರಿಗೆ ಆಡಿಯೋ ಮೂಲಕ ಮಾಹಿತಿ ನೀಡುವ ಸೌಲಭ್ಯ, ಮನರಂಜನೆಗಾಗಿ ವೈಫೈ ಸೌಲಭ್ಯ, ಸುಖಕರ ಆಸನಗಳು, ಬಯೋವ್ಯಾಕ್ಯೂಮ್ ಹೊಂದಿದ ಶೌಚಗೃಹ ಇರಲಿವೆ.

ವಂದೇ ಭಾರತ್‌ ರೈಲಿನ ಬೋಗಿಗಳ ವಿವರಪ್ರತಿ ಬೋಗಿಯಲ್ಲಿ ಪ್ರಯಾಣಿಕರು ಇರುವ ಸ್ಥಳದಲ್ಲಿಯೇ ತಿಂಡಿ, ಊಟ ಪೂರೈಸಲಾಗುತ್ತದೆ. 16 ಎಸಿ ಬೋಗಿಗಳಲ್ಲಿ 2 ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳು ಇರಲಿವೆ. 1,128 ತಿಂಗಳ ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದು. ಅಂಗವಿಕಲ ಪ್ರಯಾಣಿಕರಿಗೂ ಸಾಕಷ್ಟು ಸೌಲಭ್ಯಗಳು ಇವೆ. ರೈಲು ಕಡಿಮೆ ನಿಲುಗಡೆಗಳನ್ನು ಹೊಂದಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಆಗಲಿದೆ.

ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚಾರ

ಇನ್ನು ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚಾರ ನಡೆಸಲು ರೈಲ್ವೆ ಇಲಾಖೆ ಸಿದ್ದತೆ ನಡೆಸಿತ್ತು. ಬೆಂಗಳೂರು-ಹುಬ್ಬಳ್ಳಿ ನಡುವೆ ರಾಜ್ಯದ ಎರಡನೇ ರೈಲು ಸಂಚಾರ ನಡೆಸಲಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರಿಗೆ ಶುಭಸುದ್ದಿ ಸಿಕ್ಕಿತ್ತು. ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆ ಇಡಲಾಗಿತ್ತು. ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಒತ್ತಾಯಿಸಿದ್ದರು. ಅಲ್ಲದೇ ಧಾರವಾಡದ ತನಕ ರೈಲು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದರು.

 


Spread the love

About Laxminews 24x7

Check Also

ಧಾರವಾಡ ನೆಹರು ನಗರದ ಕೊಳಚೆ ಪ್ರದೇಶದ 121 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ.. ಹಕ್ಕುಪತ್ರ ಫಲಾನುಭವಿಗಳಿಗೆ ಹಸ್ತಾಂತರಿಸಿದ ವಿಪಕ್ಷ ಉಪನಾಯಕ ಬೆಲ್ಲದ.

Spread the love ಧಾರವಾಡ ನೆಹರು ನಗರದ ಕೊಳಚೆ ಪ್ರದೇಶದ 121 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ.. ಹಕ್ಕುಪತ್ರ ಫಲಾನುಭವಿಗಳಿಗೆ ಹಸ್ತಾಂತರಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ