ಹುಕ್ಕೇರಿ ತಾಲೂಕಿನ ಕರಗುಪ್ಪಿ, ಯಲ್ಲಾಪೂರ, ಗ್ರಾಮಸ್ಥರು ಪಾಶ್ಚಾಪೂರ ಹತ್ತಿರದ 141 ಮಾನವ ಗೇಟ ಬಂದ್ ಮಾಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ ಘಟಪ್ರಭಾ ರೈಲು ಮಾರ್ಗ ಅಗಲಿಕರಣ ಮತ್ತು ಸುಧಾರಣೆ ಕಾರ್ಯ ಜರಗುತ್ತಿದೆ ಮಾರ್ಗ ಮದ್ಯ ಕಳಪೆ ಹಲವಾರು ದಶಕಗಳಿಂದ ಪಾಶ್ಚಾಪೂರ ಹತ್ತಿರದ ಕರಗುಪ್ಪಿ, ಯಲ್ಲಾಪೂರ ಗ್ರಾಮಸ್ಥರು ಮಾನವ ಗೇಟ ಮುಖಾಂತರ ಚಲಿಸಿ ತಮ್ಮ ಜಮಿನುಗಳಿಗೆ ಹೋಗಿ ಕೃಷಿ ಕಾರ್ಯ ಮತ್ತು ಕಬ್ಬು ಸಾಗಿಸುತ್ತಾರೆ. ಆದರೆ ಈಗ ಮಾನವ ಗೇಟ ಬಂದ್ ಮಾಡುವ ಮೂಲಕ ಈ ಭಾಗದ ರೈತರಿಗೆ ತೊಂದರೆಯಾಗುತ್ತದೆ ಕಾರಣ ಈ ಗೇಟ ಇದೆ ರೀತಿ ಮುಂದು ವರೆಸಿಕೊಂಡು ಹೋಗಬೇಕು ಎಂದು ಗ್ರಾಮಸ್ಥರು, ರೈತರು ಪ್ರತಿಭಟನೆ ನಡೆಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ರೈತರು ರೈಲು ಗೇಟ ಬಾಜು ನಮ್ಮ ಗ್ರಾಮದ ಅಮದ ಸುಮಾರು 350 ಎಕರೆ ಜಮಿನು ಹೊಂದಿದ್ದು ನಾವು ತಲೆ ತಲಾಂತರಗಳಿಂದ ಇದೆ ಮಾರ್ಗವಾಗಿ ನಮ್ಮ ಜಮಿನುಗಳಿಗೆ ಹೋಗಿ ಬರುತ್ತೆವೆ ಆದರೆ ಈಗ ಏಕಾಏಕಿ ರೈಲು ಅಧಿಕಾರಿಗಳು ಮಾರ್ಗ ಬಂದ್ ಮಾಡಲು ಹೋರಾಟಿದ್ದಾರೆ ಇದಕ್ಕೆ ನಮ್ಮ ವಿರೋಧ ಇದೆ, ಈ ಕುರಿತು ನಾವು ತಹಸಿಲ್ದಾರ, ಎಸಿ ಯವರಿಗೆ ದೂರು ನಿಡಿದ್ದೇವೆ ಎನ್ನುತ್ತಾರೆ.