ವಿಜಯಪುರ: ಮೂಲ ಸೌಕರ್ಯಗಳಿಂದ ವಂಚಿತರಾದ ಮಹಾರಾಷ್ಟ್ರದ ಗಡಿನಾಡು ಕನ್ನಡಿಗರು ಕರ್ನಾಟಕಕ್ಕೆ ಸೇರುವ ಬಗ್ಗೆ ನಿರ್ಣಯ ಕೈಗೊಂಡಿದ್ದಕ್ಕೆ ಉರಿದು ಬೀಳುತ್ತಿರುವ ಮಹಾರಾಷ್ಟ್ರ ಸರಕಾರ, ಕನ್ನಡದ ಗ್ರಾಮಗಳಿಗೆ ಪಡಿತರ ಚೀಟಿ ರದ್ದು ಮಾಡುವ ಬೆದರಿಕೆ ಹಾಕುತ್ತಿದೆ.
ಈ ಬಗ್ಗೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಂಡು ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೂಲ ಸೌಕರ್ಯ ಕಲ್ಪಿಸುವಲ್ಲಿ ಗಡಿನಾಡು ಕನ್ನಡಿಗರನ್ನು ನಿರ್ಲಕ್ಷಿಸಿದ್ದಕ್ಕೆ ಮಹಾರಾಷ್ಟ್ರ ದ ವಿರುದ್ಧ ಸಹಜವಾಗಿಯೇ ತಿರುಗಿ ಬಿದ್ದಿದ್ದಾರೆ.
ಕರ್ನಾಟಕದ ನೆಲ, ಜಲ, ಭಾಷೆಯಂಥ ಆಸ್ಮಿತೆ ವಿಷಯ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಹಿತ ಎಲ್ಲ ಪಕ್ಷಗಳೂ ಕನ್ನಡದ ಪರವಾಗಿವೆ. ಪ್ರಸ್ತುತ ನಾವು ರಾಜ್ಯ ಸರಕಾರದ ಪರವಾಗಿಯೇ ನಿಲ್ಲುತ್ತೇವೆ ಎಂದರು.