ಬೆಳಗಾವಿ : ರಾಜಕೀಯ ದುರುದ್ದೇಶದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆನ ದಾಳಿ ನಡೆಸಲಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇನ್ನೇನು ರಾಜ್ಯದಲ್ಲಿ ಬೈ ಎಲೆಕ್ಷನ್ ನಡೆಯುತ್ತಿದ್ದಿದೆ. ಇದರಿಂದ ಸರ್ಕಾರ ಅಧಿಕಾರವನ್ನು ಬಳಿಸಿಕೊಂಡು ಸಿಬಿಐ ದಾಳಿ ನಡೆಸಲಾಗಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ದಾಳಿ ನಡೆಯುತ್ತಿದೆ. ನಮ್ಮ ನಾಯಕರು ಸಮರ್ಥರಿದ್ದಾರೆ, ಸಮರ್ಥವಾಗಿ ಎಲ್ಲವನ್ನೂ ಎದುರಿಸುತ್ತಾರೆ ಎಂದು ಹೇಳಿದ್ದಾರೆ.
ಯಾರನ್ನು ಸಹ ಯಾರು ಕಟ್ಟಿ ಹಾಕಲು ಆಗುವುದಿಲ್ಲ. ದೇಶದಲ್ಲಿ ಕಾನೂನು ಇದೆ ಕಾನೂನು ಹೋರಾಟ ಮಾಡ್ತಾರೆ. ಪೂರಕ ದಾಖಲೆ ಇಟ್ಟುಕೊಂಡು ದಾಳಿ ಮಾಡಲು ಯಾರು ಬೇಡ ಅಂತಾರೆ. ಒಂದು ವರ್ಷದಿಂದ ದಾಳಿ ಮಾಡಿಲ್ಲ, ಈಗ ಉಪಚುನಾವಣೆ ವೇಳೆ ಸಿಬಿಐ ದಾಳಿ ಮಾಡಿದ್ದಾರೆ. ಇದು ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.
Laxmi News 24×7