Breaking News

ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ

Spread the love

ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದಲ್ಲಿ ನಡೆದಿದೆ.

ಯಕ್ಸಂಬಾ- ಚಿಕ್ಕೋಡಿ ರಸ್ತೆಯ ಮದ್ಯ ಶವವಿಟ್ಟು ಭಜನೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಲಾಯಿತು. ಇಂದು ಬೆಳಗ್ಗೆ ಅನಾರೋಗ್ಯದಿಂದ ನಣದಿವಾಡಿ ಗ್ರಾಮದ ಸುಧಾಕರ ಮಹಾದೇವ ನಾಯಕ ಎಂಬುವವರು ಮೃತಪಟ್ಟಿದರು. ರುದ್ರಭೂಮಿಗೆ ಹೋಗುವ ದಾರಿ ವಿಚಾರಕ್ಕೆ ಸಂಬಂಧಸಿದಂತೆ ನಣದಿವಾಡಿ ಗ್ರಾಮದ ಯಕ್ಸಂಬಿ ಕುಟುಂಬವು ತಕರಾರು ತಗೆದಿತ್ತು. ಅಷ್ಟೇ ಅಲ್ಲದೇ ರುದ್ರಭೂಮಿಗೆ ತೆರಳುವ ದಾರಿಗೆ ಬೇಲಿ ಹಾಕಿ ದಾರಿಯನ್ನು ಮಾಡಿರುವ ಯಕ್ಸಂಬಿ ಕುಟುಂಬ ವಿರುದ್ದ ಸ್ಥಳೀಯರು ಹಾಗೂ ಮೃತ ಮನೆಯವರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ  ಶವ ಸಂಸ್ಕಾರಕ್ಕೆ ದಾರಿ ಮಾಡಿಕೊಡಬೇಕು ಎಂದು ರಸ್ತೆ ತಡೆಹಿಡಿದು ಪ್ರತಿಭಟನೆ ನಡೆಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಸದಲಗಾ ಪೊಲೀಸರು ಪರಿಸ್ಥಿತಿಯನ್ನು ಹತೋಟೆಗೆ ತರಲು ಪ್ರಯತ್ನಿಸಿದರು ಹಾಗೂ ಪ್ರತಿಭಟನಾಕಾರರ ಮನವೊಲಿಸಿದರು. ಈ ಕುರಿತಂತೆ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ