Breaking News

“ನದಿ ಮೂಲ, ಋಷಿ ಮೂಲದಂತೆ ಸುದ್ದಿ ಮೂಲ ಕೆದಕಿಕೊಂಡು ಹೋಗಬೇಡಿ” : C.T..ರವಿ

Spread the love

ಬೆಂಗಳೂರು,  ನದಿ ಮೂಲ, ಋಷಿ ಮೂಲದಂತೆ ಸುದ್ದಿ ಮೂಲವನ್ನು ಕೆದಕಿಕೊಂಡು ಹೋಗಬಾರದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು. ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯ ಹಸ್ತಕ್ಷೇಪದ ಆರೋಪದ ವಿಚಾರಕ್ಕೆ ಸಂಬಂಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಸುದ್ದಿಗಳ ಆಯಸ್ಸು ಗಂಟೆಗಳಷ್ಟೇ ಇರುತ್ತದೆ.

ಅದರ ಮೂಲ ಯಾವುದೆಂದು ಹುಡುಕಿಕೊಂಡು ಹೋಗಬಾರದು. ಸುದ್ದಿ ಮೂಲ ಯಾವುದು ಎಂಬುದಕ್ಕೆ ಹಲವು ಬಾರಿ ಉತ್ತರ ಸಿಗುವುದಿಲ್ಲ. ಸುದ್ದಿಗಳಿಗೆ ಸತ್ವ ಇಲ್ಲದಿದ್ದರೆ ಬಹಳ ಕಾಲ ಉಳಿಯುವುದಿಲ್ಲ. ಜನರ ಮನಸ್ಸಿಗೂ ನಾಟುವುದಿಲ್ಲ.

ಮಾಧ್ಯಮದಲ್ಲಿ ಕೆಲವು ಅಕೃತ ಸುದ್ದಿ, ಕೆಲವು ಅನಕೃತ ಸುದ್ದಿ ಬರುತ್ತಲೇ ಇರುತ್ತವೆ. ಅಕೃತ ಸುದ್ದಿಗೆ ಪ್ರತಿಕ್ರಿಯಸಬೇಕಾದ್ದು ಧರ್ಮ. ಅನಕೃತ ಸುದ್ದಿಗೆ ಬಹಳ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸುದ್ದಿ ಮೂಲ ಹುಡುಕುತ್ತಾ ಯಾಕೆ ಸಮಯ ವ್ಯರ್ಥ ಮಾಡಬೇಕು. ಕೆಲವು ಬಾರಿ ಎಲ್ಲಾ ಸುದ್ದಿಗಳಿಗೂ ಪ್ರತಿಕ್ರಿಯೆ ನೀಡಬಾರದು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಫೇಸ್‍ಬುಕ್ ಪೋಸ್ಟ್ ಗೆ ಬಹಳಷ್ಟು ಜನ ಪ್ರತಿಕ್ರಿಯೆ ನೀಡುತ್ತಾರೆ. ಎಲ್ಲಾ ಪ್ರತಿಕ್ರಿಯೆಗೂ ನಾವು ಉತ್ತರ ಕೊಡಲು ಆಗುವುದಿಲ್ಲ ಎಂದು ಹೇಳಿದರು.

ಪೂರ್ವ ನಿಶ್ಚಯದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂದಿನ ನಿರ್ಧಾರ ವರಿಷ್ಠರ ಅವಗಾಹನೆಗೆ ಬಿಟ್ಟದ್ದು. ಪದಾಕಾರಿಯಾಗಿ ಸಂಘಟನೆಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ.

ರಾಷ್ಟ್ರೀಯ ಪದಾಕಾರಿಗಳ ಸಭೆ ದೆಹಲಿಯಲ್ಲಿ ನಾಳೆ ನಡೆಯಲಿದ್ದು , ಆ ನಂತರ ಜವಾಬ್ದಾರಿ ಹಂಚಿಕೆಯಾಗಬಹುದು. ಎಲ್ಲವೂ ನಮ್ಮ ಮೇಲೆ ನಿಂತಿಲ್ಲ. ಕೆಲವೊಂದು ವ್ಯವಸ್ಥೆ ಮೇಲೆ ನಿಂತಿದೆ. ವ್ಯವಸ್ಥೆ ಪ್ರಕಾರ ನಡೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜರಾಜೇಶ್ವರಿ ನಗರ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಶಿರಾ ಕ್ಷೇತ್ರಕ್ಕೂ ಇನ್ನು ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗಿಲ್ಲ. ಮುಂದೆ ಮಸ್ಕಿ ಕ್ಷೇತ್ರದ ಚುನಾವಣೆಯೂ ಬರಬಹುದು. ಮುಖ್ಯಮಂತ್ರಿಯಾಗಲಿ, ರಾಜ್ಯಾಧ್ಯಕ್ಷರಾಗಲಿ, ವರಿಷ್ಠರಾಗಲಿ ಇವರೇ ನಮ್ಮ ಅಭ್ಯರ್ಥಿ ಎಂದು ಈ ತನಕ ಹೇಳಿಲ್ಲ. ರಾಜಕೀಯ ಪಕ್ಷ ಎಂದ ಮೇಲೆ ಆಕಾಂಕ್ಷಿಗಳಿರುವುದು ಸಹಜ. ಹೀಗಾಗಿ ಯಾವುದೇ ಗೊಂದಲವಿಲ್ಲ ಎಂದರು.

ಐಎಎಸ್ ಅಕಾರಿಯಾಗಿದ್ದ ಡಿ.ಕೆ.ರವಿ ಪತ್ನಿ ಕುಸುಮಾ ಅವರು ಸ್ಪರ್ಧೆ ಮಾಡುವ ಬಗ್ಗೆ ಏನನ್ನು ಹೇಳಲು ಬಯಸುವುದಿಲ್ಲ. ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಹೇಳಿದರು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ