ಹಾಸನ: ಗಂಡ ಇಲ್ಲದ 2 ಮಕ್ಕಳ ತಾಯಿ ವಿಧವೆಗೆ ಬಾಳು ಕೊಡುವುದಾಗಿ ನಂಬಿಸಿ ತಾಳಿಕಟ್ಟಿದ ಭೂಪ, ಈಗ ಮತ್ತೊಂದು ಮದುವೆ ಆಗಲು ಹೋಗಿ ತಾಳಿ ಕಟ್ಟಿದ ನಂತರ ಮೊದಲ ಹೆಂಡತಿಗೆ ಯೋಧನು ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾದ ಘಟನೆ ಗುರುವಾರದಂದು ಹಾಸನ ನಗರದ ಹೊರ ವಲಯ ಬೆಂಗಳೂರು ರಸ್ತೆ, ಬೂವನಹಳ್ಳಿ ಬಳಿ ಇರುವ ಸಾಧನ ಸಮುದಾಯಭವನದಲ್ಲಿ ನಡೆದಿದೆ.
ನಗರದಲ್ಲಿ ವಾಸವಾಗಿರುವ ಮೊದಲ ಹೆಂಡತಿ ಆಶಾ ಬ್ಯೂಟಿ ಪಾರ್ಲರ್ ಕೆಲಸ ಮಾಡುತ್ತಿದ್ದು, ಈಕೆಯ ಗಂಡ ಸಾವನಪ್ಪಿದ ಮೇಲೆ ಎರಡು ಮಕ್ಕಳೊಂದಿಗೆ ಒಂಟಿಯಾಗಿದ್ದಳು. ದೇಶ ಸೇವೆಯಲ್ಲಿ ತೊಡಗಿರುವ ಕಿರಣ್ ಕುಮಾರ್ ನೊಂದಿಗೆ ಆಶಾಗೆ ಪರಿಚಯವಾಗಿ ಕಳೆದ ಮೂರು ವರ್ಷಗಳಿಂದ ಲವ್ ಡವ್ ನಡೆದಿತ್ತು. ಅದು ಅತೀರೇಕವಾಗಿ 6 ತಿಂಗಳ ಹಿಂದೆ ಈಕೆಯ ಮನೆಯಲ್ಲಿಯೇ ನಾಲ್ಕು ಗೋಡೆಯ ಮಧ್ಯೆ ಯೋಧನು ತಾಳಿ ಕಟ್ಟಿ ಅಧಿಕೃತವಾಗಿ ಸಂಸಾರ ಸಾಗಿಸಲು ಆರಂಭಿಸಿದ್ದನು.
ದೇಶ ಸೇವೆಯಲ್ಲಿ ಯೋಧನಾಗಿರುವ ಈತ ಕೆಲಸದ ನಿಮಿತ್ತ ಹೋಗಿದ್ದು, ಕಿರಣ್ ಮದುವೆ ಆಗಿರುವ ಬಗ್ಗೆ ಮೊದಲೇ ಮನೆಯಲ್ಲಿ ತಿಳಿದಿತ್ತು ಎಂದು ಹೇಳಲಾಗಿದೆ. ಮನೆಯವರೇ ಸೇರಿ ನಂತರದಲ್ಲಿ ಎರಡನೇ ಮದುವೆಗೆ ಹೆಣ್ಣನ್ನು ನೋಡಿ ಸಿದ್ಧತೆ ಮಾಡಿಕೊಂಡು ಸಂಪ್ರದಾಯದಂತೆ ಮುಂದುವರೆದು ನಗರದ ಹೊರ ವಲಯ ಬೆಂಗಳೂರು ರಸ್ತೆಯ ಬಳಿ ಇರುವ ಸಾಧನ ಸಮುದಾಯ ಭವನದಲ್ಲಿ ಗುರುವಾರ ಮದುವೆ ನಿಶ್ಚಯವಾಗಿ ತಾಳಿ ಕೂಡ ಕಟ್ಟಿದ್ದನು. ವಿಚಾರ ತಿಳಿದ ಮೊದಲ ಹೆಂಡತಿ ಆಶಾ ಮದುವೆ ಮನೆಗೆ ಬಂದು ವಿಚಾರ ತಿಳಿಸಲಾಗಿದೆ.
ಆಶಾ ಹೇಳುವಂತೆ ನನಗೆ ೨ ಲಕ್ಷ ಕೊಡುತ್ತೇನೆ ನಾನು ಮದುವೆ ಆಗುತ್ತಿರುವ ಕಡೆ ನೀನು ಹೋಗಬೇಡ ಎಂದು ಇಬ್ಬರಲ್ಲಿ ಮಾತುಕತೆ ನಡೆದಿದೆ. ಆದರೇ ಆತ ಇನ್ನು 2 ಲಕ್ಷ ರೂಗಳ ಕೊಟ್ಟಿರಲಿಲ್ಲ ಎಂಬಂತೆ ಮಾತುಗಳು ಕೇಳಿ ಬಂದಿತು. ಈ ಬಗ್ಗೆ ಮೊಬೈಲ್ ನಲ್ಲಿ ಮೆಸೆಜು ಕೂಡ ಮಾಡಲಾಗಿದ್ದು, ಕೂಡಲೇ ಮೊಬೈಲ್ ಸೀಜ್ ಆಕೆ ಮಾಡಲು ಒತ್ತಾಯಿಸಿದಳು. ವಿಚಾರ ತಿಳಿದ 112 ಪೊಲೀಸ್ ತುರ್ತು ವಾಹನ ಬಂದು ಮೊದಲ ಹೆಂಡತಿ ಆಶಾ ಮತ್ತು ಹುಡುಗ ಕಿರಣ್ ಕುಮಾರ್ ಮತ್ತು ಇತನ ತಂದೆ ತಾಯಿಯನ್ನು ಕರೆದೊಯ್ಯಲಾಯಿತು.