Breaking News

ಪ್ರಮೋದ್ ಮುತಾಲಿಕ್ ಮೇಲೆ ಕಾನೂನು ಕ್ರಮ ಜರುಗಿಸಬೇಕು : ವಿಜಯ ಗುಂಟ್ರಾಳ

Spread the love

ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕೋಮು ಗಲಭೆಗೆ ಪ್ರಚೋದನೆಕಾರಿ ಹೇಳಿಕೆ ನೀಡುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಐಎಂಐಎಂ ಪಕ್ಷದ ವಿಜಯ ಗುಂಟ್ರಾಳ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಅವರಿಗೆ ಕಾನೂನಿನ ಕುರಿತು ಗೌರವವಿಲ್ಲ. ಅಲ್ಲದೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿಯೂ ಕೂಡಾ ಅವರಿಗೆ ನಂಬಿಕೆ ಇಲ್ಲ ಎಂದು ಹರಿಹಾಯ್ದರು.

ನಗರದ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಮಾಡಲಾಗಿದ್ದು, ಯಾವುದೇ ಉದ್ದೇಶದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿಲ್ಲ. ಈದ್ಗಾ ಮೈದಾನದಲ್ಲಿ ನಮ್ಮ ಮನವಿಯಂತೆ ಹು-ಧಾ ಪಾಲಿಕೆ ಟಿಪ್ಪು ಸುಲ್ತಾನ್ ಆಚರಣೆಗೆ ಅವಕಾಶ ನೀಡಿದ್ದು, ಪಾಲಿಕೆಗೆ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದರು.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ