ಹುಡುಗಿ ವಿಚಾರಕ್ಕೆ ಕಾರ್ಪೊರೇಟರ್ ಚೇತನ ಹಿರೆಕೇರೂರ ಮತ್ತು ರಾಹುಲ್ ಎಂಬ ಗುಂಪುಗಳ ನಡುವೆ ಗಲಾಟೆಯಾದ ಪರಿಣಾಮ, ಪಾಲಿಕೆ ಸದಸ್ಯ ಚೇತನ ಸೇರಿ ಮೂವರನ್ನು ಗೋಕುಲ್ ರೋಡ್ ಪೊಲೀಸರು ಅರೇಸ್ಟ್ ಮಾಡಿದ್ದಾರೆ.
ಹೌದು,,, ನಿನ್ನೆ ಭಾನುವಾರ ರಾತ್ರಿ ಗೋಕುಲ್ ರಸ್ತೆಯಲ್ಲಿರುವ ಐಸ್‌ಕ್ಯೂಬ್ ನಲ್ಲಿ ಹುಡಗಿ ವಿಚಾರಕ್ಕೆ ಕಾರ್ಪೊರೇಟರ್ ಚೇತನ್ ಹಿರೆಕೇರೂರ ಗ್ಯಾಂಗ್ ಮತ್ತು ರಾಹುಲ್ ಎಂಬ ಯುವಕನ ಗ್ಯಾಂಗ್ ಮಧ್ಯ ಗಲಾಟೆಯಾಗಿದೆ.
ಈ ಗಲಾಟೆಯಲ್ಲಿ ಚೇತನ್ ಹಿರೆಕೇರೂರ ರಾಹುಲ್ ಸೇರಿ ಇಬ್ಬರ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗೋಕುಲ್ ರೋಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಸದಸ್ಯ ಚೇತನ ಹಿರೆಕೇರೂರ ಸೇರಿ ಮೂವರನ್ನು ಅರೇಸ್ಟ್ ಮಾಡಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.