ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಸಹಕಾರ ಸಂಘಗಳು, ಬ್ಯಾಂಕ್ ಗಳಿಗೆ ರೈತರು ಸಾಲ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡದಂತೆ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಹಕಾರ ಸಂಘಗಳು, ಬ್ಯಾಂಕ್ ಗಳಿಂದ ರೈತರು ಸಾಲ ಪಡೆದು ಕೆಲವೊಮ್ಮೆ ಮರು ಪಾವತಿ ಮಾಡಲು ಆಗುವುದಿಲ್ಲ. ಇಂತಹ ಸಮಯದಲ್ಲಿ ರೈತರ ಆಸ್ತಿ ಜಪ್ತಿ ಆಗುವುದನ್ನು ತಡೆಯಲು ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ರೈತರ ಸಾಲ ಮರುಪಾವತಿ ಆಗದಿದ್ದರೆ ಆಸ್ತಿ ಜಪ್ತಿ ಮಾಡದೇ ಸಮಯಾವಕಾಶ ನೀಡಬೇಕು ಎಂದು ಸಹಕಾರ ಮತ್ತು ಇತರೆ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಿ ಸಾಲ ಕಟ್ಟದ ರೈತರ ಆಸ್ತಿ ಜಪ್ತಿ ತಡೆಯಲು ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ
Laxmi News 24×7