Breaking News

ಕರ್ನಾಟಕ ರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರು, ಬೆಳಗಾವಿಗೆ ಬರ್ತಾರಂತೆ ಶಿವಸೇನೆ ಗೂಂಡಾಗಳು..?

Spread the love

ಕರ್ನಾಟಕ ರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯೋತ್ಸವದ ದಿನ ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡಮ್ಮನ ತೇರು ಎಳೆದು ಬಾನೆತ್ತರದಲ್ಲಿ ಕನ್ನಡದ ಬಾವುಟ ಹಾರಿಸಲು ಕನ್ನಡಮ್ಮನ ಕಂದಮ್ಮಗಳು ಸಿದ್ಧತೆಯನ್ನು ನಡೆಸಿದ್ದಾರೆ. ಇದನ್ನು ನೋಡಿ ಸಹಿಸಿಕೊಳ್ಳಲು ಆಗದ ನಾಡದ್ರೋಹಿ ಎಂಇಎಸ್ ಸಂಘಟನೆ ಮತ್ತು ಎಂಇಎಸ್ ಪುಂಡರು ತಮ್ಮ ಕಿಪಾಪತಿ ಮುಂದುವರಿಸಿದ್ದಾರೆ.

 ಹೌದು ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಈ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಲು ಭರದ ಸಿದ್ಧತೆ ನಡೆಯುತ್ತಿದೆ. ಈ ಮಧ್ಯ ನಾಡದ್ರೋಹಿ ಎಂಇಎಸ್ ಪುಂಡರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಿ ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ ಸೈಕಲ್ ರ್ಯಾಲಿ ಮಾಡಿ ನೆರೆಯ ಮಹಾರಾಷ್ಟ್ರದ ಶಿವಸೇನೆಯ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಅವರಿಂದ ಪ್ರಚೋದನಕಾರಿ ಭಾಷಣ ಮಾಡಿಸಿ ಬೆಳಗಾವಿಯಲ್ಲಿ ಭಾμÁ ವೈಷಮ್ಯದ ವಿಷ ಬೀಜ ಬಿತ್ತುವ ತಮ್ಮ ಹಳೆಯ ಚಾಳಿಯನ್ನು ಈ ವರ್ಷವೂ ಮುಂದುವರಿಸಿದ್ದಾರೆ.

ಇನ್ನು ನಾಡದ್ರೋಹಿ ಎಂಇಎಸ್‍ಗೆ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿರುವ ಶಿವಸೇನೆ ಪಕ್ಷದ ಉದ್ಧವ್ ಠಾಕ್ರೆ ಬಣ ಬೆಂಬಲ ನೀಡಿದೆ. ನವೆಂಬರ್ 1ರಂದು ಮಹಾರಾಷ್ಟ್ರದ ಶಿವಸೇನೆ ಪುಂಡರು ಬೆಳಗಾವಿಗೆ ಬರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ನಿನ್ನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಲಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಸಭೆ ಮಾಡಿ ಸಭೆ ಬಳಿಕ ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದ್ದಾರೆ. ಬೆಳಗಾವಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂಬ ಉದ್ಧಟತನದ ಘೋಷಣೆ ಕೂಗಿದ್ದಾರೆ.ನವೆಂಬರ್ 1ರಂದು ನಡೆಯುವ ಎಂಇಎಸ್ ಕರಾಳ ದಿನಾಚರಣೆಗೆ ಬೆಂಬಲ ವ್ಯಕ್ತಪಡಿಸಿ ಅಕ್ಟೋಬರ್ 31ರಂದು ಶಿವಸೇನೆಯ ಎಲ್ಲಾ ಪದಾಧಿಕಾರಿಗಳು ಬೆಳಗಾವಿಯಲ್ಲಿ ಸೇರ್ತಿವಿ, ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜ ಸಮಾಧಿ ಸ್ಥಳದಲ್ಲಿ ಸೇರ್ತಿವಿ.

ಕೊಲ್ಹಾಪುರ ಕಾಗಲ್, ನಿಪ್ಪಾಣಿ, ಸಂಕೇಶ್ವರ ಮಾರ್ಗವಾಗಿ ಬೆಳಗಾವಿಗೆ ಹೋಗ್ತೀವಿ. ಅದೇ ರೀತಿ ಅಕ್ಟೋಬರ್ 31ರಂದು ಬೆಳಗಾವಿಯ ಎಂಇಎಸ್ ಮುಖಂಡರು ಕೊಲ್ಹಾಪುರಕ್ಕೆ ಬರ್ತಾರೆ. ಅವರು ನಾವು ಸೇರಿ ಬೆಳಗಾವಿಯವರೆಗೂ ರ್ಯಾಲಿ ಮಾಡ್ತೀವಿ. ಎಂಇಎಸ್, ಶಿವಸೇನೆ ಕಾರ್ಯಕರ್ತರು ಕೈಯಲ್ಲಿ ಭಗವಾ ಧ್ವಜ, ಮಶಾಲ್ ಹಿಡಿದು ಬೆಳಗಾವಿಗೆ ಹೋಗ್ತೇವೆ.ಅಕ್ಟೋಬರ್ 31ರಂದು ಬೆಳಗಾವಿಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಗೆ ಅಭಿμÉೀಕ ಮಾಡ್ತೀವಿ. ಬಳಿಕ ನವೆಂಬರ್ 1ರಂದು ಕರಾಳ ದಿನ ವೇಳೆ ಎಲ್ಲರೂ ಭಾಗಿಯಾಗ್ತೇವೆ. ಕಾಗಲ್ ಚೆಕ್‍ಪೆÇೀಸ್ಟ್‍ನಲ್ಲಿ ತಡೆದ್ರೆ ಶಿನೋಳಿ ಮಾರ್ಗವಾಗಿ ಬೆಳಗಾವಿಗೆ ಹೋಗ್ತೀವಿ ಎನ್ನುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಶಿವಸೇನೆ ಪುಂಡ ವಿಜಯ್ ದೇವಣೆ ಬಹಿರಂಗ ಸವಾಲು ಹಾಕಿದ್ದಾರೆ. 


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ :

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ