Breaking News

ಕುಂದಾಗರಿಯಲ್ಲಿ ತೆರೆದ ವಾಹನದಲ್ಲಿ ರಾಜರತ್ನನ ಭಾವಚಿತ್ರದ ಭವ್ಯ ಮೆರವಣಿಗೆ

Spread the love

ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಡಾ.ಪುನೀತ್ ರಾಜಕುಮಾರ ಇಂದಿಗೆ ಅಗಲಿ ಬರೊಬ್ಬರಿ ಒಂದು ವರ್ಷವಾಗಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪ್ಪು ಸಮಾಧಿ ಸೇರಿ ರಾಜ್ಯದ ಮೂಲೆ ಮೂಲೆಯಲ್ಲಿ ಮೊದಲ ವರ್ಷದ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಅರ್ಥಪೂರ್ಣವಾಗಿ ರಾಜರತ್ನನನ್ನು ನೆನೆಯಲಾಯಿತು.

ಹೌದು ಅದು ಅಕ್ಟೋಬರ್ 29, 2021 ಶಿವರಾಜ್‍ಕುಮಾರ್ ನಟನೆಯ ಭಜರಂಗಿ 2 ರಿಲೀಸ್ ಆಗಿತ್ತು. ರಾಜ್ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇತ್ತು. ಪುನೀತ್ ರಾಜ್‍ಕುಮಾರ್ ಅವರು ಭಜರಂಗಿ 2 ತಂಡಕ್ಕೆ ವಿಶ್ ಮಾಡಿ ಟ್ವೀಟ್ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಶಾಕಿಂಗ್ ಸುದ್ದಿ ಕೇಳಿ ಬಂತು. ಪುನೀತ್‍ಗೆ ಹೃದಯಾಘಾತ ಆಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹೊರಬಿತ್ತು.

ಪುನೀತ್ ಫಿಟ್ ಆಗಿ ಇದ್ದವರು. ಫಿಟ್‍ನೆಸ್‍ಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಅವರಿಗೆ ಹೃದಯಘಾತವಾಗಿದೆ ಎಂದಾಗ ಯಾರೂ ನಂಬಲಿಲ್ಲ. ಕೆಲವೇ ಗಂಟೆಗಳಲ್ಲಿ ಪುನೀತ್ ನಿಧನವಾರ್ತೆ ಹೊರಬಿತ್ತು. ಈ ಘಟನೆ ನಡೆದು ಇಂದಿಗೆ ಒಂದು ವರ್ಷ ಕಳೆದಿದೆ. ಹೀಗಾಗಿ ಮೊದಲ ವರ್ಷದ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಬೆಳಗಾವಿ ನಗರದ ಮಠಗಲ್ಲಿಯ ಚಾಣಕ್ಯ ಯುವಕ ಮಂಡಳದಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ತೆರೆದ ವಾಹನದಲ್ಲಿ ಆಯೋಜಿಸಲಾಗಿತ್ತು.

ಈಈ ವೇಳೆ ಡಾ.ರಾಜಕುಮಾರ ಅಭಿಮಾನಿಗಳ ಸಂಘ ಮತ್ತು ಚಾಣಕ್ಯ ಯುವಕ ಮಂಡಳದಿಂದ ನಗರದ ಮಠಗಲ್ಲಿಯಿಂದ ತೆರೆದ ವಾಹನದಲ್ಲಿ ಡಾ.ಪುನೀತ್ ರಾಜಕುಮಾರ ಭಾವ ಚಿತ್ರವಿಟ್ಟು ಪುನೀತ್ ರಾಜಕುಮಾರ ಅಭಿನಯದ ಚಲನಚಿತ್ರದ ಹಾಡುಗಳನ್ನು ಹಾಕಿ ಪುನೀತ್ ರಾಜಕುಮಾರ ಅವರಿಗೆ ಗೌರವ ಸೂಚಿಸಿದರು. ಕನ್ನಡ ಹೋರಾಟಗಾರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಭಿಮಾನಿಗಳು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಅಪ್ಪುಗೆ ನಮನ ಸಲ್ಲಿಸಿದರು.ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಉತ್ತರ ಶಾಸಕ ಅನಿಲ್ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ್ ಸೇರಿ ಇನ್ನಿತರ ಗಣ್ಯರು, ಅಭಿಮಾನಿಗಳು ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ