ಗಡಿನಾಡು ಬೆಳಗಾವಿಯ ರಾಜ್ಯೋತ್ಸವ ಈಡೀ ರಾಜ್ಯದಲ್ಲೇ ಆಕರ್ಷಕ ಮತ್ತು ಭಿನ್ನವಾಗಿರುತ್ತದೆ. ಈ ಬಾರಿಯಂತೂ ಬೆಳಗಾವಿಯ ರಾಜ್ಯೋತ್ಸವ ಅದ್ಧೂರಿ-ಮಹಾ ಅದ್ಧೂರಿಯಾಗಿ ನಡೆಯಲಿದೆ. ೧೦ ಸಾವಿರ ಅಡಿಯ ಕನ್ನಡ ಬಾವುಟದ ಮೆರವಣಿಗೆ ನಡೆಸಿ ಲಂಡನ್ ಬುಕ್ ಆಫ್ ರೆಕಾರ್ಡ್ ನಿರ್ಮಿಸಲು ಹೊರಟಿರುವ ಕನ್ನಡದ ಕುವರರು ಯಾರು ಅನ್ನುವ ಕುರಿತು ಇಲ್ಲಿದೆ ಒಂದು ಸ್ಟೋರಿ.
ಹಳದಿಗೆಂಪು ಬಾವುಟ ಹಿಡಿದು ನಲಿಯುತ್ತಿರುವ ಕನ್ನಡದ ಕುವರರು.. ನಾಡದೇವಿಯ ಜಾತ್ರೆಯ ದಿನ ಮೆರವಣಿಗೆಗೆ ಸಿದ್ಧವಾಗುತ್ತಿದ್ದೆ ಈ ಬೃಹತ್ ಬಾವುಟ.
ಹೌದು, ಈ ಬಾರಿಯ ಕರ್ನಾಟಕ ರಾಜ್ಯೋತ್ಸವದಲ್ಲಿ ಕರ್ನಾಟಕದ ಗತವೈಭವವನ್ನು ಸಾರುವ ಮತ್ತು ಕನ್ನಡ ನಾಡಿನ ಸಂಕೇತವಾದ ಬೃಹತ್ ಕನ್ನಡ ಬಾವುಟದ ಮೆರವಣಿಗೆ ನಡೆಯಲಿದೆ. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ೧೦ ಸಾವಿರ ಅಡಿ ಉದ್ದದ ಕನ್ನಡ ಬಾವುಟದ ಮೆರವಣಿಗೆ ನಡೆಯಲಿದೆ. ಅಷ್ಟೇ ಅಲ್ಲ ಇದು ಇತಿಹಾಸದ ಪುಟಗಳಲ್ಲಿ ರಾಜ್ಯೋತ್ಸವದ ದಿನ ಹೊಸ ದಾಖಲೆ ಬರೆಯಲಿದೆ. ಲಂಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಛಾಪು ಮೂಡಿಸಲಿದೆ.