Breaking News

‘ಬನಾರಸ್’ ವೇದಿಕೆಯಲ್ಲಿ ದರ್ಶನ್ ಬಿಚ್ಚು ಮಾತು

Spread the love

ಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟಿಸಿರುವ ಮೊದಲ ಸಿನಿಮಾ ‘ಬನಾರಸ್’ನ ಪ್ರೀ ರಿಲೀಸ್ ಇವೆಂಟ್ ಇಂದು (ಅಕ್ಟೋಬರ್ 22) ರಂದು ಅದ್ಧೂರಿಯಾಗಿ ಹುಬ್ಬಳ್ಳಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸಿನಿಮಾದ ಬಗ್ಗೆ ಹಾಗೂ ಝೈದ್ ಖಾನ್, ಅವರ ತಂದೆ ಜಮೀರ್ ಅಹ್ಮದ್ ಬಗ್ಗೆ ಮಾತನಾಡಿದರು.

 

ತಮ್ಮ ಎಂದಿನ ಶೈಲಿಯಲ್ಲಿ, ವೇದಿಕೆ ಮೇಲೆ ಚಪ್ಪಲಿ ಬಿಟ್ಟು, ತಮ್ಮ ಅಭಿಮಾನಿಗಳಿಗೆ ‘ಸೆಲೆಬ್ರಿಟಿ’ ಎಂದು ಸಂಭೋದಿಸುತ್ತಾ ಎಲ್ಲಿರಗೂ ನಮಸ್ಕಾರ ಹೇಳಿ ಭಾಷಣ ಶುರು ಮಾಡಿದ ನಟ ದರ್ಶನ್, ‘ಬನಾರಸ್’ ಸಿನಿಮಾದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾಷಣದ ಆರಂಭದಲ್ಲಿಯೇ ಝೈದ್ ಖಾನ್ ಅನ್ನು ಪ್ರೀತಿಯಿಂದ ಬೈದ ದರ್ಶನ್, ”ಝೈದ್ ಖಾನ್ ಬೆನ್ನಿಗೆ ಅಂಟಿದ ಬೇತಾಳ. ಯಾವಾಗಲೋ ಒಮ್ಮೆ ‘ಬನಾರಸ್’ ಸಿನಿಮಾ ನೋಡ್ತೀನಿ ಎಂದಿದ್ದೆ. ಅದನ್ನೇ ಹಿಡಿದುಕೊಂಡು ಸಿನಿಮಾ ನೋಡುವಂತೆ ಒತ್ತಾಯ ಮಾಡಿದ. ಒಮ್ಮೆ ‘ಕ್ರಾಂತಿ’ ಸಿನಿಮಾದ ಫೈಟ್ ದೃಶ್ಯ ಶೂಟಿಂಗ್ ಮುಗಿಸಿ ಸುಸ್ತಾಗಿ ಬಂದು ಜಿಮ್ ಮಾಡಿ ಮಲಗೋಣವೆಂದು ಬಂದರೆ ಅಲ್ಲಿ ಝೈದ್ ಕೂತಿದ್ದ” ಎಂದು ನೆನಪು ಮಾಡಿಕೊಂಡರು.

ಸಿನಿಮಾ ನೋಡುತ್ತಾ, ನಿದ್ದೆಯೇ ಹೊರಟು ಹೋಯಿತು: ದರ್ಶನ್
 ”ಸಿನಿಮಾ ನೋಡಲು ಚಿತ್ರಮಂದಿರ ಬುಕ್ ಮಾಡಿದ್ದೇನೆ ಎಂದ. ರಾಜಕಾರಣಿ ಮಗ, ಏನೋ ಶೋಕಿಗೆ ಸಿನಿಮಾ ಮಾಡಿರ್ತಾನೆ ಬಿಡು ಎಂದುಕೊಂಡು ಅಲ್ಲೇ ಊಟ ಮಾಡಿ, ಚಿತ್ರಮಂದಿರದಲ್ಲೇ ನಿದ್ದೆ ಮಾಡಿಬಿಡೋಣ ಅಂದುಕೊಂಡು ಹೋದೆ. ಚಿತ್ರಮಂದಿರಕ್ಕೆ ಹೋಗುವ ಮುನ್ನ ಚೆನ್ನಾಗಿ ಊಟ ಮಾಡಿದೆ. ಆದರೆ ಚಿತ್ರಮಂದಿರಕ್ಕೆ ಹೋದ ಮೇಲೆ ನನಗೆ ನಿದ್ದೆಯೇ ಹೊರಟು ಹೋಯಿತು. ಆ ಸಿನಿಮಾ ಅಷ್ಟು ಚೆನ್ನಾಗಿತ್ತು” ಎಂದರು ದರ್ಶನ್.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ