ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಳೆದ 8 ದಿನಗಳಿಂದ ನೀರು ಬಿಡದ ಹಿನ್ನೆಲೆ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಹೌದು ಎಂಕೆ ಹುಬ್ಬಳ್ಳಿ ಪಟ್ಟಣದ ವಾರ್ಡ ನಂ.1, 2, 3ರಲ್ಲಿ ಕಳೆದ ಎಂಟು ದಿನಗಳಿಂದ ನೀರು ಬಿಟ್ಟಿಲ್ಲ. ಇಲ್ಲಿನ ಜನ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರಾಜಶೇಖರ ಹಿಂಡಲಗಿ 8 ದಿನಗಳಿಂದ ಕುಡಿಯುವ ನೀರು ಬಾರದೇ ಇರುವದರಿಂದ ವಯೋವೃದ್ಧರು ಮತ್ತು ಹೆಣ್ಣು ಮಕ್ಕಳು ಸುಮಾರು ಒಂದು ಕಿಮೀ ದೂರ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಇವತ್ತಿನ ದಿನ ನೀರು ಬಿಡದೆ ಇದ್ದರೆ, ನಾಳೆ ಪಪಂಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದರು
Laxmi News 24×7