ರಾಜ್ಯದ ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗಿದೆ ಎಂಬ ಸಂಕೇತವನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ನೀಡಿದ್ದಾರೆ.
ಭಾನುವಾರದಂದು ಬೆಳಗಾವಿಯ ಸರ್ಕೀಟ್ ಹೌಸ್‍ನಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಅತುಲನೀಯ ಶಕ್ತಿಯಾಗಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆ ಪಕ್ಷದ ಶಕ್ತಿಸಂವರ್ಧನೆಗೆ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಜನರು ಕೂಡ ಬಿಜೆಪಿಯೆಡೆ ಒಲವು ತೋರುತ್ತಿದ್ದು, ಸಹಜವಾಗಿಯೇ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ.
ಮುಂದಿನ ಚುನಾವಣೆಯ ಗೆಲ್ಲುವಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪಾತ್ರ ಹಿರಿದಾಗಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ ಎಂಬ ಸಂಕೇತವನ್ನು ಕೂಡ ಅವರು ನೀಡಿದರು. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರಮೇಶ ಜಾರಕಿಹೊಳಿ ಅವರ ವರ್ಚಸ್ಸಿದೆ. ಚುನಾವಣೆ ಬಳಿಕ ಬಿಜೆಪಿಯನ್ನು ಗಟ್ಟಿಗೊಳಿಸಲು ಅವರ ಯೋಗದಾನ ಮಹತ್ತರವಾಗಿದೆ. ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಮತಭೇದವಿಲ್ಲ. ಮತಭೇದ ಇರುವುದು ಕೇವಲ ಬಿಜೆಪಿಯಲ್ಲಿ ಎಂದರು.