Breaking News

ಹಾವು ಕಚ್ಚಿದ ಬಾಲಕನ ಪ್ರಾಣ ಉಳಿಸಿದ ಕಾಂಗ್ರೆಸ್ ಕಾರ್ಯಕರ್ತ..

Spread the love

ಹಾವು ಕಚ್ಚಿ ಪ್ರಜ್ಞಾಹೀನವಾಗಿ ಬಿದ್ದಿದ್ದ ಬಾಲಕನನ್ನು ಸೂಕ್ತ ಸಮಯಕ್ಕೆ ಅಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಮಗುವಿನ ಪ್ರಾಣವನ್ನು ಕಾಪಾಡಿ ಮಾನವೀಯತೆ ಮೆರೆದ ಘಟನೆ ಬೆಳಗಾವಿ ತಾಲೂಕಿನ ದೇಸೂರು ಗ್ರಾಮದಲ್ಲಿ ನಡೆದಿದಿದೆ.

ಹೌದು ಬೆಳಗಾವಿ ತಾಲೂಕಿನ ದೇಸೂರು ಗ್ರಾಮದಲ್ಲಿ ಗಣೇಶ ಅಜೀತ್ ಲೋಹಾರ್(11) ಎಂಬ ಬಾಲಕನಿಗೆ ಹಾವು ಕಚ್ಚಿತ್ತು. ಈ ವೇಳೆ ಪ್ರಜ್ಞಾಹೀನನಾಗಿ ಬಿದ್ದಿದ್ದ ಬಾಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ.

ಈ ವೇಳೆ ದೇಸೂರಿನ ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತ ಹಾಗೂ ಸಮಾಜಸೇವಕರಾದ ವೆಂಕಟ ಪಾಟೀಲ್ ಮಗುವನ್ನು ಅಂಬ್ಯುಲೆನ್ಸ್ನಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿ ಮಗುವಿನ ಪ್ರಾಣವನ್ನು ಕಾಪಾಡಿದ್ದಾರೆ.

ಈ ಮೂಲಕ ಮಾನವೀಯತೆ ಎಲ್ಲಕ್ಕಿಂದ ದೊಡ್ಡದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವೆಂಕಟ್ ಪಾಟೀಲ್‌ರವರ ಮಾನವೀಯ ಕಾರ್ಯಕ್ಕೆ ದೇಸೂರ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಜನ್ಮದಿನ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ, ಮೃಣಾಲ್

Spread the loveಬೆಳಗಾವಿ : ಶನಿವಾರ ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಮುಂಬಾಗದಲ್ಲಿ ಹಿರಿಯ ನಾಗರಿಕರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ