Breaking News

ಸಂಸದ ಬಿ.ವೈ ರಾಘವೇಂದ್ರೇ ಬ್ಯಾಂಕ್ ಖಾತೆಗೂ ಕನ್ನ ಹಾಕಿದ ಹ್ಯಾಕರ್ಸ್: ಬರೋಬ್ಬರಿ 16 ಲಕ್ಷ ಧೋಖಾ.!

Spread the love

ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರ ( MP BY Vijayendra ) ಅವರ ಬ್ಯಾಂಕ್ ಖಾತೆಗೂ, ಆನ್ ಲೈನ್ ವಂಚಕರು ಕನ್ನ ಹಾಕಿದ್ದಾರೆ. ಮೂಲಕ ಬರೋಬ್ಬರಿ 16 ಲಕ್ಷ ಲಪಟಾಯಿಸಿರೋದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಮಾತನಾಡಿರುವಂತ ಸಂಸದ ಬಿ.ವೈ ರಾಘವೇಂದ್ರ ಅವರು, ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಗ್ರಾಹಕರು ಕೂಡ ಎಚ್ಚರಿಕೆ ವಹಿಸಬೇಕಿದೆ ಎಂದರು.

ಬ್ಯಾಂಕ್ ನಲ್ಲಿ ಖಾತೆ ( Bank Account ) ಹೊಂದಿರುವಂತ ಪ್ರತಿಯೊಬ್ಬರು ಆನ್ ಲೈನ್ ವಂಚಕರ ( Online Scam ) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಒಟಿಪಿ ನಂಬರ್ ಬಗ್ಗೆ ಯಾರಾದರೂ ಮಾಹಿತಿ ಕೇಳಿದರೇ ಕೊಡಲೇ ಬಾರದು. ಈಗ ವಾಟ್ಸಾಪ್ ಮೂಲಕವೂ ಒಟಿಪಿ ಕೇಳುತ್ತಿದ್ದಾರೆ. ಯಾರೂ ಕೊಡಬಾರದು ಎಂದರು.

ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಹೊಂದಿರುವಂತ ಖಾತೆಯಿಂದ 16 ಲಕ್ಷ ಹಣ ದಿಢೀರ್ ವರ್ಗಾವಣೆಗೊಂಡಿತ್ತು. ಹೀಗೆ ವರ್ಗಾವಣೆಗೊಂಡ ಹಣ ನಾನು ಮಾಡಿದ್ದಲ್ಲ. ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ನನ್ನ ಬ್ಯಾಂಕ್ ಖಾತೆಗೆ ಕನ್ನ ಹಾಕಿದಂತ ಹ್ಯಾಕರ್ ಒಬ್ಬರನ್ನು ಪತ್ತೆ ಹಚ್ಚಿ, ಬಂಧಿಸಿದರು. ಆ ಬಳಿಕ ನನ್ನ ಖಾತೆಯಿಂದ ಲಪಟಾಯಿಸಿದಂತ ಹಣ ವಾಪಾಸ್ ಬಂತು ಎಂದು ಹೇಳಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

Spread the loveಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ