Breaking News

ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಂಡು 10 ವರ್ಷ, ಒಂದು ಅಧಿವೇಶನ ಕೇವಲ 10 ದಿನಕ್ಕೆ ಮಾತ್ರ ಸಿಮೀತ

Spread the love

ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಂಡು 10 ವರ್ಷ ಆಗಿದೆ. ಆದರೂ ಕೇವಲ ಕಟ್ಟಡವಾಗಿಯೇ ಈ ಶಕ್ತಿ ಸೌಧ ಉಳಿದುಕೊಂಡಿದೆ. ವರ್ಷದಲ್ಲಿ ಅಪರೂಪಕ್ಕೆ ಎನ್ನುವಂತೆ ಒಂದು ಬಾರಿ ಅಧಿವೇಶನ ನಡೆಯೋದು ಬಿಟ್ಟರೆ ಮತ್ಯಾವುದಕ್ಕೂ ಇದು ಉಪಯೋಗಕ್ಕೆ ಬರುತ್ತಿಲ್ಲ.

ಹೌದು ಉತ್ತರ ಕರ್ನಾಟಕ ಜನರ ಶಕ್ತಿ ಕೇಂದ್ರವಾಗಿದ್ದ ಸುವರ್ಣಸೌಧಕ್ಕೆ ಈವರೆಗಿನ ಯಾವ ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಈ ಸುವರ್ಣಸೌಧ ಕಟ್ಟಿ ಹತ್ತು ವರ್ಷವಾಗಿದೆ. ಈ ಹತ್ತು ವರ್ಷದಲ್ಲಿ ಅಧಿವೇಶನ ನಡೆದಿದ್ದು ಕೇವಲ 80 ದಿನ. 450 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಸೌಧ ವರ್ಷವೀಡಿ ಖಾಲಿ ಖಾಲಿಯಾಗಿ ಬಣಗೊಡುತ್ತಿದೆ. ರಾಜ್ಯಮಟ್ಟದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವಂತೆ ಸಾಕಷ್ಟು ಹೋರಾಟ ಮಾಡಿದ್ರು ಸರ್ಕಾರ ಮಾತ್ರ ಸೊಪ್ಪು ಹಾಕಿಲ್ಲ.

ಇನ್ನು ಈ ಸೌಧದ ನಿರ್ವಹಣೆಗೆ ಖರ್ಚಾಗಿದ್ದು, 50 ಕೋಟಿ ರೂಪಾಯಿ. ಪ್ರತಿ ವರ್ಷ ಸೌಧದ ನಿರ್ವಹಣೆಗೆ 5 ಕೋಟಿ ರೂಪಾಯಿ ತಗುಲುತ್ತದೆ. 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನ ನಿರ್ವಹಣೆ, ಸ್ವಚ್ಛತೆ. 2.5. ಕೋಟಿ ವೆಚ್ಚದಲ್ಲಿ ವಿದ್ಯುತ್ ಬಿಲ್ ಮತ್ತು ಇತರೆ ನಿರ್ವಹಣೆಗೆ ಖರ್ಚು ಮಾಡಲಾಗುತ್ತದೆ. ಇನ್ನು ಸೌಧಕ್ಕೆ ಈವರೆಗೆ ಶಿಫ್ಟ್ ಆಗಿದ್ದು ಒಂದೇ ಒಂದು ರಾಜ್ಯ ಮಟ್ಟದ ಕಚೇರಿ. ಅದು ರಾಜ್ಯ ಮಾಹಿತಿ ಆಯೋಗದ ಕಚೇರಿ. ಈ ಕಚೇರಿ ಮಾತ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ 10 ವರ್ಷದಲ್ಲಿ 8 ಅಧಿವೇಶ ನಡೆದಿದ್ದು, ಒಂದು ಅಧಿವೇಶನ ಕೇವಲ 10 ದಿನಕ್ಕೆ ಮಾತ್ರ ಸಿಮೀತವಾಗಿತ್ತು. ಇನ್ನು ಕೋವಿಡ್ ನೆಪದಲ್ಲಿ 2 ವರ್ಷ ಇಲ್ಲಿ ಅಧಿವೇಶನವನ್ನೇ ನಡೆಸಲಿಲ್ಲ.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ