Breaking News
Home / ರಾಜಕೀಯ / ಬೆಂಗಳೂರು: ಉದ್ಘಾಟನೆಗೊಂಡ ತಿಂಗಳೊಳಗೆ ಕುಸಿದ 25 ಕೋಟಿ ಕಾಮಗಾರಿ ರಸ್ತೆ!

ಬೆಂಗಳೂರು: ಉದ್ಘಾಟನೆಗೊಂಡ ತಿಂಗಳೊಳಗೆ ಕುಸಿದ 25 ಕೋಟಿ ಕಾಮಗಾರಿ ರಸ್ತೆ!

Spread the love

ಬೆಂಗಳೂರು: ಭಾನುವಾರ ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್ ಸಮೀಪ ಕಳಪೆ ಕಾಮಗಾರಿ ಪರಿಣಾಮದಿಂದಾಗಿ ರಸ್ತೆ ಕುಸಿದಿದೆ. ಪರಿಣಾಮ ಬಿಜೆಪಿ 40% ಕಮಿಷನ್​ಗೆ ಇದು ಸೂಕ್ತ ಉದಾಹರಣೆಯಾಗಿದೆ ಎಂದು ಜನ ಆರೋಪ ಮಾಡುತ್ತಿದ್ದಾರೆ.

ತಿಂಗಳ ಹಿಂದೆಯಷ್ಟೇ ಈ ಅಂಡರ್ ಪಾಸ್ ಅನ್ನು ಉದ್ಘಾಟಿಸಿಲಾಗಿತ್ತು. 2019 ರಲ್ಲಿ 25 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಇತ್ತೀಚೆಗಷ್ಟೇ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗಿತ್ತು. ಆದ್ರೆ ಭಾನುವಾರ ಅಂಡರ್ ಪಾಸ್​ನ ಮೇಲ್ಭಾಗದ ರಸ್ತೆಯಲ್ಲಿ ಬೃಹತ್ ಗುಂಡಿಯನ್ನು ಕಂಡ ಸಾರ್ವಜನಿಕರು ಮತ್ತು ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದು ಮಾರತ್ತಹಳ್ಳಿಯಿಂದ ವೈಟ್ ಫೀಲ್ಡ್ ಹಾಗೂ ವರ್ತೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರಿಸುತ್ತವೆ. ಈ ರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಲೈನ್ ಒಡೆದ ಪರಿಣಾಮದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.


Spread the love

About Laxminews 24x7

Check Also

170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

Spread the love ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ