Breaking News

ಬೆಳಗಾವಿಯ ಓಲ್ಡ್ ಪಿಬಿ ರಸ್ತೆಯಲ್ಲಿ ಯಮರೂಪಿ ತಗ್ಗು-ಗುಂಡಿಗಳು

Spread the love

ಬೆಳಗಾವಿಯ ಓಲ್ಡ್ ಪಿಬಿ ರಸ್ತೆಯ ಶಿವಾಜಿ ಮಹಾರಾಜ ಓವರ್ ಬ್ರಿಡ್ಜ್ ಮೇಲಿನ ರಸ್ತೆಯ ಮೇಲೆ ಸಾಕಷ್ಟು ತಗ್ಗು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸಾಕಷ್ಟು ತೊಂದರೆ ಅನಿಭವಿಸುತ್ತಿದ್ದಾರೆ. ಇದನ್ನು ಲಕ್ಷಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ರಸ್ತೆಯ ಗುಂಡಿಗಳಲ್ಲಿ ತೆಂಗಿನ ಸಸಿಯನ್ನು ನೆಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ರಾಜ್ಯ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಬೆಳಗಾವಿ ನಗರದ ಒಳ ಚಿತ್ರಣ ಬೇರೆಯೇ ಆಗಿದೆ. ಈ ದೃಶ್ಯವನ್ನೊಮ್ಮೆ ನೋಡಿ. ರಸ್ತೆಯ ಮೇಲೆ ಬಿದ್ದಿರುವ ತಗ್ಗು ಗುಂಡಿಗಳು. ಇನ್ನು ರಸ್ತೆಯಲ್ಲಿ ಸಾಗಲು ಹರಸಾಹಸ ಮಾಡುತ್ತಿರುವ ವಾಹನ ಚಾಲಕರು.

ಪ್ರಾಣವನ್ನು ಕೈಯ್ಯಲ್ಲಿ ಹಿಡಿದು ಸಾಗುತ್ತಿರುವ ಬೈಕ್ ಸವಾರರು ಒಂದೆಡೆಯಾದರೆ, ರಸ್ತೆಯಲ್ಲಿರುವ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಇಲ್ಲಿನ ಸ್ಥಳೀಯ ನಾಗರಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ರೀತಿ ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಲ್ಲಿಯೇ ತೆಂಗಿನ ಸಸಿಯನ್ನು ನೆಡುವ ಮೂಲಕ ಜನ ಪ್ರತಿನಿಧಗಳು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

Spread the love ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ