Breaking News

ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಗೆ ಬರದಿದ್ದರೆ ಅವರ ಕಾರ್ಖಾನೆಗೇ ಹೋಗಿ ಸಭೆ ಮಾಡುತ್ತೇವೆ: ನಿತೇಶ್ ಪಾಟೀಲ

Spread the love

ಬೆಳಗಾವಿ ಜಿಲ್ಲೆಯಲ್ಲಿ ೨೯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಆಡಳಿತ ಮಂಡಳಿಯವರನ್ನು ಸಭೆಗೆ ಕರೆದಿದ್ದೇವೆ ಆದರೆ ಈ ಕುರಿತಂತೆ ಆದೇಶ ಮಾಡಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರಣಾಂತರದಿAದ ಸಭೆಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಹೇಳಿದರು.

ನಗರದಲ್ಲಿ ಇಂದು ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ವಿವಿಧ ರೈತ ಸಂಘನೆಯ ಮುಖಂಡರ ಜತೆಗೆ ಕರೆಯಲಾದ ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಮಾತನಾಡಿದರು. ಕಬ್ಬು ಬೆಳೆಗಾರರ ಸಮಸ್ಯೆಗಳು ಸಾಕಷ್ಟಿವೆ.

ಹಾಗಾಗಿ ಈ ಕುರಿತಂತೆ ಚರ್ಚೆಯನ್ನು ನಡೆಸುವ ಉದ್ದೇಶದಿಂದ ಇಂದು ಸಭೆಯನ್ನು ಕರೆಯಲಾಗಿದೆ. ಈಗಾಗಲೇ ಕೇಂದ್ರ ಸರಕಾರ ಕಬ್ಬಿಗೆ ಎಫ್‌ಆರ್‌ಪಿ ಬೆಲೆಯನ್ನು ನಿಗದಿ ಮಾಡಿದೆ. ಈ ಕುರಿತಂತೆ ನಾವೂ ಕೂಡ ನಮ್ಮ ಜಿಲ್ಲೆಯಲ್ಲಿ ಪ್ರಕಟಣೆಯ ಮೂಲಕ ತಿಳಿಸಿದ್ದೇವೆ. ಆದರೆ ಈ ಕುರಿತಂತೆ ಎಲ್ಲಾ ಸಕ್ಕೆರೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸಿದೆ.

ಇಂದು ಸಭೆಗೆ ಕೆಲ ಕಂಪನಿಯವರು ಹಾಜರಾಗಿಲ್ಲ. ಆದರೆ ಈ ಕುರಿತಂತೆ ಮತ್ತೆ ಸಭೆಯನ್ನು ಕರೆದು ಅವರಿಗೂ ತಿಳಿಸೋಣ. ಇನ್ನು ಪ್ರತೀ ಕಾರ್ಖಾನೆ ತನ್ನ ಸುಗ್ಗಿದರ ಹಾಗೂ ಕಬ್ಬು ಕಟಾವು ದರವನ್ನು ನಿರ್ಧಾರ ಮಾಡಲಿ.

ಇನ್ನು ಈ ಕುರಿತಂತೆ ಈಗಾಗಲೇ ಪ್ರಾರಂಭವಾಗಿರುವ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ ತಿಳಿಸೋಣ. ಒಂದು ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಗೆ ಬರದಿದ್ದರೆ ಅವರ ಕಾರ್ಖಾನೆಗೇ ಹೋಗಿ ಸಭೆ ಮಾಡುತ್ತೇವೆ ಎಂದರು.


Spread the love

About Laxminews 24x7

Check Also

ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಆಗಿಲ್ಲ

Spread the loveಬೆಳಗಾವಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಆಗಿಲ್ಲ, ಅವಧಿ ಮುಗಿದ ಆಹಾರವನ್ನು ಪೂರೈಕೆ ಮಾಡಿಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ