Breaking News

ಅ.3ರಿಂದ ರಾಜ್ಯ ಹೈಕೋರ್ಟ್ ಗೆ 5 ದಿನಗಳ ದಸರಾ ರಜೆ

Spread the love

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಅ.3ರಿಂದ 7ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಅ.1 ಮತ್ತು 2 ಶನಿವಾರ ಹಾಗೂ ಭಾನುವಾರ ಅದೇ ರೀತಿ ಅ.8 ಮತ್ತು 9 ಕ್ರಮವಾಗಿ ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಒಟ್ಟು 9 ದಿನಗಳ ಕಾಲ ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ರಜೆ ಇರಲಿದೆ.

 

ತುರ್ತು ಪ್ರಕರಣಗಳ ವಿಚಾರಣೆಗೆ ಅ.6ರಂದು ಬೆಂಗಳೂರು ಪ್ರಧಾನ ಪೀಠದಲ್ಲಿ ರಜಾ ಕಾಲದ ವಿಶೇಷ ಪೀಠಗಳ ಕಲಾಪ ನಡೆಯಲಿದೆ.

ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ರಜಾ ಕಾಲದ ಪೀಠಗಳ ಕಲಾಪ ಇರುವುದಿಲ್ಲ. ಈ ಎರಡೂ ಪೀಠಗಳ ತುರ್ತು ಪ್ರಕರಣಗಳನ್ನು ಬೆಂಗಳೂರು ಪ್ರಧಾನ ಪೀಠದಲ್ಲಿನ ರಜಾ ಕಾಲದ ನ್ಯಾಯಪೀಠಗಳು ವಿಚಾರಣೆ ನಡೆಸಲಿವೆ.


Spread the love

About Laxminews 24x7

Check Also

ಸಿಲಿಂಡರ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ – ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ

Spread the loveಬೆಂಗಳೂರು: ಸಿಲಿಂಡರ್ ದರ ಹೆಚ್ಚಳಕ್ಕೆ  ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಕೆಪಿಸಿಸಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ