Breaking News

ಗೋಕಾಕ :ಬೇರೊಬ್ಬರ ಮನೆಯ ಗ್ಯಾಲರಿಯಲ್ಲಿ ಮಹಿಳೆಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Spread the love

ಗೋಕಾಕ : ಗೋಕಾಕ ನಗರದ ಕಿಲ್ಲಾ ಪ್ರದೇಶದಲ್ಲಿ ಬೇರೊಬ್ಬರ ಮನೆಯ ಗ್ಯಾಲರಿಯಲ್ಲಿ ಮಹಿಳೆಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಶವವಾಗಿ ಪತ್ತೆಯಾಗಿರುವ ಮಹಿಳೆಯನ್ನು ಮರಾಠಾಗಲ್ಲಿಯ ನಿವಾಸಿಯಾದ ಜಭೀನಾ ಮುಲ್ಲಾ (40) ಎಂದು ಗುರುತಿಸಲಾಗಿದೆ.

ಗೋಕಾಕ ನಗರದ ಕಿಲ್ಲಾದಲ್ಲಿರುವ ಕಿರಣ್ ದೀಕ್ಷಿತ್ ಎಂಬುವವರ ಮನೆಯ ಮುಂದಿನ ಗ್ಯಾಲರಿಯಲ್ಲಿ ಮೃತದೇಹ ನೇತಾಡುತ್ತಿತ್ತು. ಮನೆ ರಸ್ತೆ ಪಕ್ಕದಲ್ಲಿರುವುದರಿಂದ ಈ ದೃಶ್ಯ ಕಂಡು ವಾಕಿಂಗ್ ಹೋಗುತ್ತಿದ್ದವರು ಬೆಚ್ಚಿಬಿದ್ದಿದ್ದಾರೆ.

ಕೆಲವು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಕಿರಣ್ ದೀಕ್ಷಿತ್ ಹಾಗೂ ಕುಟುಂಬಸ್ಥರು ಬೇರೆಡೆ ತೆರಳಿತ್ತು. ಹೀಗಾಗಿ ಆ ಮನೆಯಲ್ಲಿ ಯಾರೂ ಇಲ್ಲದಿರುವದನ್ನು ಗಮನಿಸಿದ್ದ ಜಭೀನಾ ಆ ಮನೆಯ ಗ್ಯಾಲರಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಇನ್ನೂ ಮಹಿಳೆಯ ನಿಗೂಢ ಸಾವಿಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಗೋಕಾಕ ಶಹರ ಠಾಣೆ ‌ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

https://fb.watch/fQ_MBVYhIy/

 


Spread the love

About Laxminews 24x7

Check Also

ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಾವಣೆ ವಿರೋಧಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ಕೂಲಿ ಕಾರ್ಮಿಕರು

Spread the loveಬೆಳಗಾವಿ ಹುಕ್ಕೇರಿ ತಾಲೂಕಿನ ಗೂಟುರ್ ಗ್ರಾಮ ಪಂಚಾಯತ್ ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ