ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

Spread the love

ಬಕವಿ-ಬನಹಟ್ಟಿ: ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಅದನ್ನೇ ಪ್ರತಿನಿತ್ಯ ತಮ್ಮ ಕುಟುಂಬದೊಂದಿಗೆ ಮುಂದುವರೆಸಿಕೊಂಡು ಕಲ್ಲು ಗುಡ್ಡಗಳ ಭೂಮಿಯನ್ನು ಹದ ಮಾಡಿ ಈ ಭಾಗದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆದು ಲಕ್ಷಾಂತರೂಗಳ ಲಾಭಗಳಿಸಬಹುದು ಎಂಬುದನ್ನು ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿಯ ಮಲ್ಲಿಕಾರ್ಜುನ ಹನಮಂತ ಜನವಾಡ ತೋರಿಸಿಕೊಟ್ಟಿದ್ದಾರೆ.

 

ಮಲ್ಲಿಕಾರ್ಜುನ ಕಲಿತಿದ್ದು ಎಸ್.ಎಸ್.ಎಲ್.ಸಿ ಆದರೆ ಸಾಧನೆ ಮಾತ್ರ ಮುಗಿಲೆತ್ತರದು. ಕೇವಲ 1 ಎಕರೆ ಜಾಗದಲ್ಲಿ ಗ್ಯಾಲನ್ ತಳಿಯ ಬದನೆಕಾಯಿಗಳನ್ನು ಬೆಳೆದು ಆರು ತಿಂಗಳ ಅವಧಿಯಲ್ಲಿ ಲಕ್ಷಾಂತರ ರೂ.ಲಾಭವನ್ನು ಮಾಡಿಕೊಂಡ ರೈತ ಮಲ್ಲಿಕಾರ್ಜುನ ಜನವಾಡ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಬೆಳೆ : 1 ಎಕರೆ ಜಮೀನಿನಲ್ಲಿ ಮೊದಲು ತಿಪ್ಪೆಗೊಬ್ಬರ, ಸರಕಾರಿ ಗೊಬ್ಬರ ಬೇವಿನ ಹಿಂಡಿ ಸೇರಿದಂತೆ ಇತರೆ ಗೊಬ್ಬರಗಳನ್ನು ಹಾಕಿ ಬೆಡ್ ಮಾಡಿಕೊಂಡು ಸಾಲಿನಿಂದ ಸಾಲಿಗೆ 7 ಫೂಟ ಅಂತರ ಗಿಡದಿಂದ ಗಿಡಕ್ಕೆ ೩ಫೂಟಗೆ ಒಂದು ಸಸಿಯಂತೆ ಸಮೀಪದ ಜಗದಾಳ ಗ್ರಾಮದ ಪ್ರವೀರಾಮ ಅಗ್ರೊ ಎಜಿನ್ಸಿಯಿಂದ ಗ್ಯಾಲನ್ ತಳಿಯ ಸಸಿಗಳನ್ನು ಪಡೆದು ಅವರ ಮಾರ್ಗದರ್ಶದಲ್ಲಿ ೩೦೦೦ ಸಸಿಗಳನ್ನು ನಾಟಿ ಮಾಡಿದ್ದಾರೆ.

ಹನಿ ನೀರಾವರಿ ಮೂಲಕ ನೀರು ಪೂರೈಸಲಾಗಿದ್ದು, ಇದಕ್ಕೆ ಬರುವ ರೋಗಗಳಿಗೆ ತಕ್ಕಂತೆ ಕೆಲವು ಸಿಂಪರಣೆಗಳನ್ನು ಮಾಡಲಾಗಿದೆ. ಮೌತ ಹುಳ ಆಗದಂತೆ ತಡೆಯಲು ಸೋಲಾರ ಲ್ಯಾಂಪಗಳನ್ನು ಅಳವಡಿಸಲಾಗಿದೆ. ಇದು ಒಟ್ಟು 6 ತಿಂಗಳ ಬೆಳೆಯಾಗಿದ್ದು, ನಾಟಿ ಮಾಡಿದ 60 ದಿನಗಳಲ್ಲಿ ಬದನೆಕಾಯಿಗಳು ಬರಲಾರಂಭಿಸಿದರೆ ಮತ್ತೆ ಮುಂದೆ ಎರಡುವರೆ ತಿಂಗಳುಗಳ ಕಾಲ ಸತತವಾಗಿ ಬದನೆಕಾಯಿಗಳು ಬರುತ್ತವೆ.

ಅಂದಾಜು 15 ರಿಂದ 20 ಟನ್ ಇಳುವರಿ ಬಂದಿದೆ. 25 ರಿಂದ 30 ರೂ ಬೆಲೆ ಬಂದಿದೆ. ಈಗಾಗಲೇ 4 ರಿಂದ 5 ಲಕ್ಷ ಆದಾಯ ಬಂದಿದೆ. ಇನ್ನೂ 5 ಲಕ್ಷದವರೆಗೆ ಲಾಭದ ನಿರೀಕ್ಷೆಯಲ್ಲಿದ್ದೇವೆ.

ಆರಂಭದಿಂದ ಬದನೆಕಾಯಿ ಬೆಳೆ ಬರುವವರೆಗೆ ಅಂದಾಜು ರೂ. ಎರಡುವರೆ ಲಕ್ಷದವರೆಗೆ ಖರ್ಚು ಮಾಡಿದ್ದು, ಆರು ತಿಂಗಳ ಅವಧಿಯಲ್ಲಿ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ತೆಗೆದು ಲಕ್ಷಾಂತರ ರೂ. ಲಾಭವನ್ನು ಮಾಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ.ಈ ಬದನೆಯನ್ನು ಬೆಳಗಾವಿಗೆ ತಮ್ಮದೆ ವಾಹನದ ಮೂಲಕ ಕಳಹಿಸುತ್ತಾರೆ. ನಂತರ ಅಲ್ಲಿಂದ ಈ ಗ್ಯಾಲನ್ ತಳಿಯ ಬದನೆ ಮಹಾರಾಷ್ಟ್ರದ ಪುಣೆ, ಮುಂಬೈ ಮತ್ತು ಗೋವಾ ರಾಜ್ಯಗಳಿಗೆ ತಲುಪುತ್ತದೆ.

ಒಂದು ವಾರಕ್ಕೆ ನಾಲ್ಕು ದಿನಗಳ ಕಾಲ ಬದನೆಯನ್ನು ತೆಗೆಯುತ್ತಾರೆ. ಒಂದು ವಾರಕ್ಕೆ ಅಂದಾಜು ೩ ಟನ್ನಷ್ಟು ಕಟಿಂಗ್ ಆಗುತ್ತದೆ. ಯಾವುದೆ ಎಜೆಂಟ್‌ರುಗಳು ಇಲ್ಲದೆ ತಾವೇ ತಮ್ಮ ವಾಹನಗಳ ಮೂಲಕ ಬದನೆಗಳನ್ನು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ