ದೇಶದೆಲ್ಲೆಡೆ ಶರನ್ನವರಾತ್ರಿಯ ಸಂಭ್ರಮ ಆರಂಭವಾಗಿದೆ. ನವರಾತ್ರಿ ಬಂದರೆ ಸಾಕು ಹಾವೇರಿಯ ನವದುರ್ಗೆಯರ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡುತ್ತೆ. ದೇವಸ್ಥಾನಕ್ಕೆ ದೇವಸ್ಥಾನವೇ ಪುಷ್ಪಾಲಂಕಾರದಲ್ಲಿ ಕಂಗೊಳಿಸುತ್ತದೆ. ಈ ದೇವಸ್ಥಾನದ ಒಂದೇ ಗರ್ಭಗುಡಿಯಲ್ಲಿ ಒಂಬತ್ತು ದುರ್ಗೆಯರು ಸ್ಥಾಪನೆಯಾಗಿರುವುದು ವಿಶೇಷ.
ನವರಾತ್ರಿಯ ಈ ದಿನಗಳಲ್ಲಿ ನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೇಯ ದಿನ ಬ್ರಹ್ಮಚಾರಿಣೀ, ಮೂರನೇಯ ದಿನ ಚಂದ್ರಘಂಟಾ, ನಾಲ್ಕನೇಯ ದಿನ ಕೂಷ್ಮಾಂಡಾ, ಐದನೇಯ ದಿನ ಸ್ಕಂದಮಾತಾ, ಆರನೇಯ ದಿನ ಕಾತ್ಯಾಯಿನಿ, ಎಳನೇಯ ದಿನ ಕಾಲರಾತ್ರಿ, ಎಂಟನೇಯ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ ಒಂಬತ್ತನೆಯ ದಿನ ಸಿದ್ಧಿದಾತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ.