ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿರುದ್ಧ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೌದು ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳು ಸಮರ ಸಾರಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯವೇತನ ಮಂಜೂರಾಗಿದೆ.
ಮಂಜೂರಾದ ಮೊತ್ತದಲ್ಲಿ ನೀಡಿದ ಮೊತ್ತಕ್ಕಿಂತ ಕಡಿಮೆ ಶಿಷ್ಯವೇತನ ಜಮೆ ಮಾಡಲಾಗುತ್ತಿದೆ. ಹೀಗಾಗಿ ಉಳಿದ ಮೊತ್ತವನ್ನು ಡಿಸಿಬಿ ಪ್ರಕಾರ ವಿದ್ಯಾರ್ಥಿಗಳು ಮರುಭರಣಾ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಘಟಕದವರಿಂದ ಸೂಚನೆ ನೀಡಿದ ಹಿನ್ನೆಲೆ ವಿದ್ಯಾರ್ಥಿಗಳು ಶುಲ್ಕದ ಬಾಕಿ ಮೊತ್ತ ಪಾವತಿಸುವಂತೆ ರಾಣಿ ಚನ್ನಮ್ಮ ವಿವಿ ಹೊರಡಿಸಿದ ಸುತ್ತೋಲೆ ವಿರೋಧಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದರು.ಕಳೆದ ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ರೂ ಸ್ಥಳಕ್ಕೆ ಬಾರದ ಕುಲಪತಿ ಪ್ರೊ.ರಾಮಚಂದ್ರಗೌಡ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಗಳು ಸಮೀಪಿಸುವಾಗಲೇ ರಾಣಿ ಚನ್ನಮ್ಮ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು ಕೆಂಡಾಮಂಡಲವಾಗಿದ್ದು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಶ್ವವಿದ್ಯಾಲಯದ ಜನರಲ್ ಸೆಕ್ರೆಟರಿ ಪರಶುರಾಮ್ ಕಡಿಮೆ ಶಿಷ್ಯವೇತನ ಯಾಕೆ ಮಂಜೂರು ಮಾಡಿದ್ದಿರಿ ಎಂದು ಹರಿಹಾಯ್ದಿದ್ದಾರೆ. ಈಗ ಪರೀಕ್ಷೆ ಸಮಯದಲ್ಲಿ ಹಾಲ್‍ಟಿಕೆಟ್ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಲ್‍ಟಿಕೆಟ್ ಡೌನ್‍ಲೋಡ್ ಮಾಡದಂತೆ ವೆಬ್‍ಸೈಟ್ ಲಾಕ್ ಮಾಡಿದ್ದಾರೆ. ನಮ್ಮ ಪ್ರತಿಭಟನೆಯಿಂದಾಗಿ ಯಾವುದೇ ಹಣ ತುಂಬಿಸಿಕೊಳ್ಳದೇ ಪರೀಕ್ಷಗೆ ಅವಕಾಶ ಮಾಡಿಕೊಡುತ್ತೇವ ಎಂದು ರಜಿಸ್ಟ್ರಾರ್ ಹೇಳಿದ್ದಾರೆ.