ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವಂತ ಪ್ರಭಾರ ಭತ್ಯೆಗಳನ್ನು ( In-charge Allowance Rate ), ಇದೀಗ ರಾಜ್ಯ ಸರ್ಕಾರ ಪರಿಷ್ಕರಿಸಿ ಆದೇಶಿಸಿದೆ.
ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Employees ) ದಸರಾ ಗಿಫ್ಟ್ ಆಗಿ ಸರ್ಕಾರ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.
ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ, ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ಮೂರು ತಿಂಗಳವರೆಗೆ ಶೇ.7.5 ದರದಲ್ಲಿ, ಆ ನಂತ್ರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇ.15ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗದಿಪಡಿಸಿ, ಆದೇಶಿಸಲಾಗಿತ್ತು ಎಂದಿದ್ದಾರೆ.
ಇದೀಗ ಸರ್ಕಾರದ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಸುಗಮ ಆಡಳಿತಕ್ಕಾಗಿ ಹಲವಾರು ಸಿಬ್ಬಂದಿಗಳನ್ನು ಒಂದಕ್ಕಿತ ಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪ್ರಭಾರ, ಸಮವರ್ತಿ ಪ್ರಭಾರದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಈ ಅಧಿಕಾರಿಗಳು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ಅಧಿಕಾರಿ, ನೌಕರರುಗಳಿಗೆ ಪ್ರಭಾರ ಭತ್ಯೆ ಮಂಜೂರು ಮಾಡಲು ಹಾಲಿ ಅನುಸರಿಸುತ್ತಿರುವ ಕಾರ್ಯವಿಧಾನದ ಜಟಿಲತೆಯಿಂದಾಗಿ ಹಲವು ಸಂದರ್ಭಗಳಲ್ಲಿ ಪ್ರಭಾರ ಭತ್ಯೆ ಪಡೆಯುವುದು ಬಹಳ ಕಷ್ಟಕರವಾಗುತ್ತಿದೆ. ಈ ಎಲ್ಲವನ್ನು ಪರಿಶೀಲಿಸಿ, ಈ ಕಾರ್ಯವಿಧಾನವನ್ನು ಸರಳಗೊಳಿಸುವ ನಿಟ್ಟಿನಲ್ಲಿ, ಪ್ರಸ್ತುತ ಎರಡು ಹಂತದಲ್ಲಿ ನೀಡುತ್ತಿರುವ ಪ್ರಭಾರ ಭತ್ಯೆಯನ್ನು ವಿಲೀನಗೊಳಿಸಿ, ಒಂದೇ ಹಂತದಲ್ಲಿ ನೀಡುವ ಬಗ್ಗೆ ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.