ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿದ್ದ ಕಾಂಗ್ರೆಸ್ ಈಗ ” ಪೇಸಿಎಂ” ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದ್ದು, ಬಿಜೆಪಿ ‘ಸ್ಕ್ಯಾಮ್ ರಾಮಯ್ಯ’ ಎಂದು ತಿರುಗೇಟು ನೀಡುತ್ತಿದೆ.
ಬೆಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ “ಪೇಸಿಎಂ” ಪೋಸ್ಟರ್ ಅಂಟಿಸಿ, ಸಾಮಾಜಿಕ ಜಾಲತಾಣದಲ್ಲೂ ” ಪೇಸಿಎಂ” ಅಭಿಯಾನ ತೀವ್ರಗೊಳಿಸಿತ್ತು.
ಪ್ರತಿಯಾಗಿ ಬಿಜೆಪಿ ಹೋರಾಟಕ್ಕಿಳಿದು ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ‘ಸ್ಕ್ಯಾಮ್ ರಾಮಯ್ಯ’ ಎಂಬ ವ್ಯಂಗ್ಯವಾದ ಚಿತ್ರಗಳುಳ್ಳ, ಹಲವು ಆರೋಪಗಳುಳ್ಳ ಪುಸ್ತಕವನ್ನು ಬಿಡುಗಡೆ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ . ರವಿ ಕುಮಾರ್, ಸಿದ್ದರಾಜು, , ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಎಂ. ಜಿ. ಮಹೇಶ್ ಉಪಸ್ಥಿತರಿದ್ದರು.
‘ಸ್ಕ್ಯಾಮ್ ರಾಮಯ್ಯನ ಹಗರಣಗಳ ಪುರಾಣದ ಕುರಿತಾದ ʼಸ್ಕ್ಯಾಮ್ ರಾಮಯ್ಯʼ ಪುಸ್ತಕವನ್ನು ಬಿಡುಗಡೆ ಮಾಡಿರುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳಿದರು.
Laxmi News 24×7