Breaking News

ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ: ಶಿವನಗೌಡ ಪಾಟೀಲ

Spread the love

ಬೆಳಗಾವಿ: ಕೃಷಿ ಕಾರ್ಮಿಕರ ಮಕ್ಕಳಿಗೆ ಇದು ಸಂತಸದ ಸುದ್ದಿ. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ‘ಮುಖ್ಯಮಂತ್ರಿ ರೈತ ವಿದ್ಯಾವಿಧಿ’ ಯೋಜನೆ ವಿಸ್ತರಿಸಲಾಗಿದೆ. ‍ಹಿಂದೆ ತಂದೆ- ತಾಯಿ ಅಥವಾ ಅಜ್ಜ- ಅಜ್ಜಿ ಹೆಸರಿನಲ್ಲಿ ಹೊಲ ಇದ್ದವರು ಮಾತ್ರ ಅರ್ಹರಾಗಿದ್ದರು.

ಪ್ರಸಕ್ತ (2022-23) ವರ್ಷದಿಂದ ಕೃಷಿ ಕಾರ್ಮಿಕರ ಮಕ್ಕಳೂ ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ರಾಜು ಕಡಕೋಳ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ಹೆಣ್ಣುಮಕ್ಕಳಿಗೆ 8ನೇ ತರಗತಿಯಿಂದಲೇ ‍ಪ್ರತಿ ವರ್ಷ ₹ 2,000 ನಿಧಿ ನೀಡಲಾಗುತ್ತದೆ. ಗಂಡುಮಕ್ಕಳಿಗೆ ಈ ಹಿಂದಿನಂತೆ ಪಿಯು ಮುಗಿದ ಬಳಿಕ ಸಿಗಲಿದೆ. ಶೀಘ್ರದಲ್ಲೇ ಇದರ ಅರ್ಜಿ ಕೂಡ ಕರೆಯಲಾಗುವುದು ಎಂದರು.


Spread the love

About Laxminews 24x7

Check Also

ಹುಬ್ಬಳ್ಳಿ: ಇಡಿ ಅಧಿಕಾರಿಗಳೆಂದು ಹೇಳಿಕೊಂಡು ಬಂಗಾರ, ಹಣ ದೋಚಿದ ಆರೋಪಿಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

Spread the loveಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ (ನವೆಂಬರ್ 19 ) ಇಡಿ ಅಧಿಕಾರಿಗಳೆಂದು ಹೇಳಿಕೊಂಡು, ಮೂರು ಕೋಟಿ ರೂಪಾಯಿಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ