ಬಳ್ಳಾರಿ: ಬಳ್ಳಾರಿ ವಿಭಾಗದ ಅರಣ್ಯ ಅಧಿಕಾರಿಯೊಬ್ಬರು ರಾಜ್ಯ ಅರಣ್ಯ ಇಲಾಖೆಗೆ ಮುಜುಗರ ಉಂಟು ಮಾಡುವಂತೆ ಮಾಡಿದ್ದು, ತಾನು ಬಳ್ಳಾರಿ ಸಂಚಾರಿ ಪೋಲೀಸರಂತೆ ಪೋಸು ಕೊಟ್ಟು, ವಾಹನ ಸವಾರರಿಂದ ಹಣ ವಸೂಲಿ ಮಾಡಿದ್ದಕ್ಕೆ ಸಾರ್ವಜನಿಕರು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು, ಆರೋಪಿ ಉಪ ವಲಯ ಅರಣ್ಯಾಧಿಕಾರಿಯನ್ನು ಹಿಡಿದ ಥಳಿಸಿದ ಘಟನೆ ಸೋಮವಾರ ಬಳ್ಳಾರಿ ನಗರದಲ್ಲಿ ವರದಿಯಾಗಿದೆ.
ಆರೋಪಿ ಅಧಿಕಾರಿ ಭಾನುವಾರ ‘ಡ್ಯೂಟಿ’ಯಲ್ಲಿದ್ದು, ಹಲವು ವಾಹನ ಚಾಲಕರಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಬಳ್ಳಾರಿಯ ಮೋತಿ ಸರ್ಕಲ್‌ನ ಸ್ಥಳೀಯರು ಮತ್ತು ಉದ್ಯಮಿಗಳು ಮಾಹಿತಿ ನೀಡಿದ್ದಾರೆ.
“ಸೋಮವಾರವೂ ಅವರು ಸಂಚಾರಿ ಪೋಲೀಸ್ ರೀತಿ ಪೋಸ್ ನೀಡುವುದನ್ನು ಮುಂದುವರೆಸಿದ್ದರು ಮತ್ತು ಕಾನೂನು ಉಲ್ಲಂಘಿಸುವ ವಾಹನ ಚಾಲಕರಿಂದ ಹಣ ವಸೂಲಿ ಮಾಡಿದರು. ಸ್ವಲ್ಪ ಸಮಯದ ನಂತರ ಅವರು ಕ್ಯಾಂಟೀನ್‌ಗೆ ಬಂದು ಹಣಕ್ಕಾಗಿ ಬೇಡಿಕೆಯಿಟ್ಟರು. ತಾವು ಈ ಪ್ರದೇಶಕ್ಕೆ ಹೊಸಬರೇ? ಎಂದು ಕ್ಯಾಂಟೀನ್ ಮಾಲೀಕರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಅವರು ನಕಲಿ ಐಡಿ ಹೊಂದಿದ್ದರು ಮತ್ತು ಹೋಟೆಲ್‌ನಲ್ಲಿ ಕುಳಿತಿದ್ದ ಜನರಿಗೆ ಗನ್(ಆಟಿಕೆ ಗನ್) ತೋರಿಸಿದರು’ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.