ಚಿಕ್ಕೋಡಿ: ಅಕ್ರಮ ಸಾರಾಯಿ ಮಾರಾಟ ಮಾಡಿದ ವ್ಯಕ್ತಿಗೆ ಚಿಕ್ಕೋಡಿ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದ ಆನಂದ ಮಹಾದೇವ ಗರಬುಡೆ ಎಂಬಾತನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾನೆ.
ಕಳೆದ 24-09- 2015 ರಂದು ಜೈನಾಪೂರ ಕ್ರಾಸ್ ಹತ್ತಿರ ಅಕ್ರಮ ಸಾರಾಯಿ ಮಾರಾಟ ಮಾಡುವ ಕುರಿತು ಆರೋಪಿ ಮೇಲೆ ಅಬಕಾರಿ ಉಪ ನಿರೀಕ್ಷಕ ವಿ.ಎ.ಕಳ್ಳಿಕದ್ದಿ ಪ್ರಕರಣ ದಾಖಲಿಸಿದ್ದರು. ಅಂದಿನ ಅಬಕಾರಿ ಉಪ ನಿರೀಕ್ಷಕ ಡಿ.ಎನ್.ಮಬ್ರುಮಕಲ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32,34 ರಂತೆ ಆರೋಪಿ ಆನಂದ ಗರಬುಡೆ ಈತನಿಗೆ ಮೂರು ವರ್ಷ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಗಂಗಾಧರ ಪಾಟೀಲ ವಾದ ಮಂಡಿಸಿದರು.
ಮಂಜುನಾಥ ನೇಸರಗಿ ನ್ಯಾಯಾಲಯದ ಕಾನಸ್ಟೇಬಲ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಚಿಕ್ಕೋಡಿಯ ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.