Breaking News

ಜೂಜುಕೋರರಿಗೆ ಬಿಸಿ: ಬೆಳಗಾವಿಯಿಂದ ಮತ್ತೊಬ್ಬ ಮಟ್ಕಾ ಬುಕ್ಕಿ ಗಡಿಪಾರು

Spread the love

ಬೆಳಗಾವಿ: ನಗರದಲ್ಲಿ ಮಟ್ಕಾ, ಓಸಿ ಆಡಲು ಜನರನ್ನು ಪ್ರೇರೇಪಿಸುತ್ತಿದ್ದ ಬುಕ್ಕಿಯನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಜೂಜುಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

ಇಲ್ಲಿಯ ಅನಗೋಳದ ಪರುಶರಾಮ ಬಾಬು ಮೇತ್ರಿ ಎಂಬಾತನನ್ನು ಒಂದು ವರ್ಷಗಳ ಕಾಲ 2023 ಸೆ. 18ರ ವರೆಗೆ ಗಡಿಪಾರು ಮಾಡಲಾಗಿದೆ. ಬೆಳಗಾವಿಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿ ಗಡಾದಿ ಆದೇಶ ಹೊರಡಿಸಿದ್ದಾರೆ.

 

ಪರುಶರಾಮ ಮೇತ್ರಿ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಪ್ರಕರಣಗಳು ನ್ಯಾಯಾಲಯದಲ್ಲಿ ಶಿಕ್ಷೆಯಾಗಿವೆ. ಆದರೂ ಸಾರ್ವಜನಿಕವಾಗಿ ಓಸಿ, ಮಟ್ಕಾ ಆಡಲು ಜನರನ್ನು ಪ್ರೇರೇಪಿಸುತ್ತಿದ್ದನು. ಈ ಬಗ್ಗೆ ಪೊಲೀಸರು ಈತನನ್ನು ಕರೆಯಿಸಿ ವಿಚಾರಣೆ ನಡೆಸಿ ಅನೇಕ ಸಲ ಎಚ್ಚರಿಕೆ ನೀಡಿದ್ದರೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು. ಇನ್ನೂ ಓಸಿ, ಮಟ್ಕಾ ದಂಧೆಯಲ್ಲಿ ತೊಡಗಿದ್ದನು.

ಹೀಗಾಗಿ ಡಿಸಿಪಿ ಗಡಾದಿ ಅವರು ಆರೋಪಿ ಪರುಶರಾಮನಿಗೆ ಗಡಿಪಾರು ಮಾಡುವ ಮೂಲಕ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೂರು ತಿಂಗಳ ಹಿಂದೆಯೂ ಇದೇ ರೀತಿಯಾಗಿ ಓಸಿ, ಮಟ್ಕಾ ಆಡುತ್ತ ಜನರನ್ನು ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬೆಳಗಾವಿ ಜಿಲ್ಲೆಯಿಂದ ಡಿಸಿಪಿ ಗಡಾದಿ ಗಡಿಪಾರು ಮಾಡಿದ್ದರು.

ಮಾರೀಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ ಯಲ್ಲಪ್ಪ ಯಲ್ಲಾರಿ,‌ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಲಾಶ ಶಂಕರ ಬಾಳೆಕುಂದ್ರಿ ಎಂಬವರನ್ನು ಗಡಿಪಾರು ಮಾಡಿದ್ದರು. ಈಗ ಮತ್ತೊಬ್ಬ ಆರೋಪಿಯನ್ನು ಗಡಿಪಾರು ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ