Breaking News

ಈಗ ೨೦೨೩ರ ಚುನಾವಣೆಯಲ್ಲಿ ಉಭಯ ನಾಯಕರ ಮಧ್ಯೆ ಮತ್ತೆ ಟಿಕೆಟ್‌ಗೆ ಫೈಟ್ ಶುರುವಾಗಿದೆ. ಇತ್ತೀಚೆಗೆ ಬೈಲಹೊಂಗಲಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಬಿಎಸ್‌ವೈ ಈ ವೇಳೆ ಜಾಣನಡೆ ಪ್ರದರ್ಶನ ಮಾಡಿದ್ದಾರೆ. ಗಾಣಿಗ ಸಮಾಜ ಹಾಗೂ ನೌಕರರ ಸಮಾವೇಶಕ್ಕೆಂದು ಬೈಲಹೊಂಗಲಕ್ಕೆ ಬಿಎಸ್ ಯಡಿಯೂರಪ್ಪ ಆಗಮಿಸಿದ್ದರು. ಬೈಲಹೊಂಗಲದ ಪೃಥ್ವಿ ಗಾರ್ಡನ್‌ನಲ್ಲಿ ಮೊನ್ನೆ ನಡೆದಿದ್ದ ಕಾರ್ಯಕ್ರಮ ಹಿನ್ನೆಲೆ ಬೈಲಹೊಂಗಲಕ್ಕೆ ಬರುತ್ತಿದ್ದಂತೆ ಬಿಎಸ್‌ವೈ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮನೆಗೆ ಭೇಟಿ ನೀಡಿದ್ದರು. ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಮನೆಯಲ್ಲಿ ಉಪಹಾರ ಸೇವಿಸಿ ಕಾರ್ಯಕ್ರಮಕ್ಕೆ ತೆರಳಿದ್ದರು.

Spread the love

ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗೆ ಮಾಜಿ ಸಿಎಂ ಬಿಎಸ್‌ವೈ ಬೈಲಹೊಂಗಕ್ಕೆ ಆಗಮಿಸಿದ್ದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹೌದು ಬೈಲಹೊಂಗಲ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ-ಕೆಜೆಪಿ ಕಿಚ್ಚು ಇನ್ನೂ ಆರಿಲ್ಲ. ಬೈಲಹೊಂಗಲ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಜಗದೀಶ್ ಮೆಟಗುಡ್ ಹಾಗೂ ಡಾ.ವಿಶ್ವನಾಥ ಪಾಟೀಲ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಡಾ. ವಿಶ್ವನಾಥ್ ಪಾಟೀಲ್ ಕೆಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ೨೦೧೩ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್ ಮೆಟಗುಡ್ ಪರಾಭವಗೊಂಡಿದ್ದರು. ೨೦೧೮ರ ಚುನಾವಣೆಯಲ್ಲಿ ಡಾ. ವಿಶ್ವನಾಥ್ ಪಾಟೀಲ್ ಬಿಜೆಪಿ ಟಿಕೆಟ್ ಪಡೆದಿದ್ದರು. ಆಗ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಗದೀಶ್ ಮೆಟಗುಡ್‌ರಿಂದ ಬಿಜೆಪಿಗೆ ಸೋಲು ಉಂಟಾಗಿತ್ತು.

ಈಗ ೨೦೨೩ರ ಚುನಾವಣೆಯಲ್ಲಿ ಉಭಯ ನಾಯಕರ ಮಧ್ಯೆ ಮತ್ತೆ ಟಿಕೆಟ್‌ಗೆ ಫೈಟ್ ಶುರುವಾಗಿದೆ. ಇತ್ತೀಚೆಗೆ ಬೈಲಹೊಂಗಲಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಬಿಎಸ್‌ವೈ ಈ ವೇಳೆ ಜಾಣನಡೆ ಪ್ರದರ್ಶನ ಮಾಡಿದ್ದಾರೆ. ಗಾಣಿಗ ಸಮಾಜ ಹಾಗೂ ನೌಕರರ ಸಮಾವೇಶಕ್ಕೆಂದು ಬೈಲಹೊಂಗಲಕ್ಕೆ ಬಿಎಸ್ ಯಡಿಯೂರಪ್ಪ ಆಗಮಿಸಿದ್ದರು. ಬೈಲಹೊಂಗಲದ ಪೃಥ್ವಿ ಗಾರ್ಡನ್‌ನಲ್ಲಿ ಮೊನ್ನೆ ನಡೆದಿದ್ದ ಕಾರ್ಯಕ್ರಮ ಹಿನ್ನೆಲೆ ಬೈಲಹೊಂಗಲಕ್ಕೆ ಬರುತ್ತಿದ್ದಂತೆ ಬಿಎಸ್‌ವೈ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮನೆಗೆ ಭೇಟಿ ನೀಡಿದ್ದರು. ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಮನೆಯಲ್ಲಿ ಉಪಹಾರ ಸೇವಿಸಿ ಕಾರ್ಯಕ್ರಮಕ್ಕೆ ತೆರಳಿದ್ದರು.

Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ