ರಾಯಚೂರು: ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಕೆಲಸ ಮಾಡದವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನಲು ಅವರಿಗೆ ಅಧಿಕಾರವಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯ ಪಟ್ಟರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಸಾರ್ವತ್ರಿಕ ಚುವಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಲ್ಲ.
ಅಧ್ಯಕ್ಷರಾಗಿ ಡಿಕೆಶಿವಕುಮಾರ್ ಗೆ ಅಧಿಕಾರವಿದ್ದು, ಅವರ ಹೇಳಿಕೆ ತಪ್ಪೇನಿಲ್ಲ. ಸಿಎಲ್ ಪಿ ನಾಯಕರಿದ್ದಾರೆ, ಎಲೆಕ್ಷನ್ ಕಮಿಟಿ ಟಿಕೆಟ್ ನೀಡುವ ನಿರ್ಧಾರ ಮಾಡುತ್ತದೆ. ಇಲ್ಲಿ ಒಬ್ಬರ ನಿರ್ಧಾರ ಅಂತಿಮವಲ್ಲ. ಎಲ್ಲರೂ ಒಟ್ಟಿಗೆ ಕುಳಿತು ನಿರ್ಧಾರ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯ ಮಾತನಾಡುವ ರೀತಿ ಬೇರೆ, ಡಿಕೆಶಿ ಮಾತನಾಡುವ ರೀತಿ ಬೇರೆ. ಡಿಕೆಶಿಯವರು ಜೊರಾಗಿ ಮಾತನಾಡುತ್ತಾರೆ. ಅದು ಅವರ ಶೈಲಿ ಅಷ್ಟೇ. ಸಿದ್ದರಾಮೊತ್ಸವ ಯಶಸ್ವಿಯಾಯ್ತು ಆದ್ರೆ ಟ್ರಾಫಿಕ್ ನಿರ್ವಹಣೆ ಆಗಲಿಲ್ಲ ಎಂದು ಸಹಜವಾಗಿ ಹೇಳಿದ್ದಾರೆ. ಅದಕ್ಕೇ ನಾವು ಏನು ಮಾಡಲು ಸಾಧ್ಯ.
ಹೆಚ್ಚು ಜನ ಬಂದಿದ್ದಕ್ಕೆ ಪೊಲೀಸರಿಗೂ ಏನೂ ಮಾಡಲು ಆಗಲಿಲ್ಲ. ಅದಕ್ಕೆ ಡಿಕೆಶಿಯವರು ಟ್ರಾಫಿಕ್ ಮ್ಯಾನೇಜ್ ಮಾಡುವಲ್ಲಿ ಸೋತಿದ್ದೇವೆ ಎಂದಿದ್ದಾರೆ ವಿನಃ ಕಾರ್ಯಕ್ರಮ ವಿಫಲವಾಗಿದೆ ಎಂದಲ್ಲ ಎಂದು ರಾಯರೆಡ್ಡಿ ಹೇಳಿದರು.