Breaking News

ಬಿಎಸ್ವೈ ವಿರುದ್ದ FIR ಗುಮ್ಮ: ಒಂದು ಕಲ್ಲಿಗೆ ಅಮಿತ್ ಶಾ ಹೊಡೆದ 2 ಏಟು?

Spread the love

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಲೋಕಾಯುಕ್ತದಲ್ಲಿ FIR ದಾಖಲಾಗಿದೆ. ಇದರ ಜೊತೆಗೆ, ಅವರ ಪುತ್ರ ವಿಜಯೇಂದ್ರ ಮತ್ತು ತಾನೇ ಆಪರೇಶನ್ ಕಮಲದ ಮೂಲಕ ಕರೆದುಕೊಂಡು ಬಂದಿದ್ದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ವಿರುದ್ದ ಕೂಡಾ.

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಈ ವಿದ್ಯಮಾನದ ಹಿಂದೆ ರಾಜಕೀಯ ಸಮೀಕರಣ ಏನಿರಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ವರಿಷ್ಠರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಏನಾದರೂ ಹೊರಟಿದ್ದಾರಾ?

 

ಬಿಎಸ್ವೈ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು ವಿರೋಧ ಪಕ್ಷಗಳಿಗೆ ಇನ್ನೊಂದು ಅಸ್ತ್ರ ಸಿಕ್ಕಂತಾಗಿರುವುದಂತೂ ಹೌದು. ಹೇಗೂ, ತನಿಖಾ ಸಂಸ್ಥೆಗಳನ್ನು ಬಿಜೆಪಿ ತನಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಕ್ಕೆ ಇದು ಇನ್ನಷ್ಟು ಪುಷ್ಠಿ ನೀಡಿದಂತಾಗಿದೆಯೇ?

ಈ ರೀತಿಯ ಹಲವು ಸುದ್ದಿಗಳಿಗೆ ಲೋಕಾಯುಕ್ತದ FIR ಆಹಾರವಾಗಿದೆ. ಹತ್ತು ಹಲವು ಆಯಾಮಗಳಲ್ಲಿ ಈ ವಿದ್ಯಮಾನವನ್ನು ವಿಶ್ಲೇಷಿಸಲಾಗುತ್ತಿದೆ. ಅದರಲ್ಲಿ ಒಂದನ್ನು ಸ್ಲೈಡಿನಲ್ಲಿ ವಿವರಿಸಲಾಗಿದೆ. ಬಿಎಸ್ವೈ ವಿದ್ಯಮಾನಕ್ಕೆ ಹೀಗೂ ಒಂದು ಆಯಾಮ ಇರಬಹುದಾ?

ಯಡಿಯೂರಪ್ಪರನ್ನು ಬಿಜೆಪಿಯ ವರಿಷ್ಠರು ಕಡೆಗಣಿಸುತ್ತಿದ್ದಾರೆಯಡಿಯೂರಪ್ಪನವರನ್ನು ಬಿಜೆಪಿಯ ವರಿಷ್ಠರು ಕಡೆಗಣಿಸುತ್ತಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗುತ್ತಿದ್ದ ಸಂದರ್ಭದಲ್ಲಿ, ಹೈಕಮಾಂಡ್ ಅವರಿಗೆ ಪಕ್ಷದ ಅತ್ಯುನ್ನತ ಸಂಸದೀಯ ಮಂಡಳಿಯಲ್ಲಿ ಸ್ಥಾನವನ್ನು ನೀಡಿ ಗೌರವಿಸಿತ್ತು. ಕೇಂದ್ರದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದ ಬಿಎಸ್ವೈ ಹಿಂಬಾಲಕರು ಇದನ್ನು ಭರ್ಜರಿಯಾಗಿ ಸಂಭ್ರಮಿಸಿದ್ದರು. ಆ ಮೂಲಕ, ರಾಜ್ಯದ ನಿರ್ಣಾಯಕ ಮತಬ್ಯಾಂಕ್ ತಮ್ಮಿಂದ ‘ಕೈ’ತಪ್ಪದಂತೇ ನೋಡಿಕೊಳ್ಳುವಲ್ಲಿ ಅಮಿತ್ ಶಾ ಒಂದು ಹಂತಕ್ಕೆ ಯಶಸ್ವಿಯಾಗಿದ್ದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಎಸಿಬಿ ವಿಸರ್ಜನೆ

ಎರಡು ವಾರದ ಕೆಳಗೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಸರಕಾರ ವಿಸರ್ಜಿಸಿತ್ತು. ಇದರಿಂದ, ಲೋಕಾಯುಕ್ತಕ್ಕೆ ಇನ್ನಷ್ಟು ಪವರ್ ಅನ್ನು ರಾಜ್ಯ ಸರಕಾರ ನೀಡುವ ಅನಿವಾರ್ಯತೆಗೆ ಬಿದ್ದಿತ್ತು. ರಾಜ್ಯದಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮದಂತೆ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಸಂಪೂರ್ಣ ಅಧಿಕಾರವನ್ನು ಕೊಡಲಾಗಿತ್ತು. ಇದಾದ ನಂತರ, ಲೋಕಾಯುಕ್ತಕ್ಕೆ ಸಿಕ್ಕ ಮೊದಲ ಕೇಸೇ ಯಡಿಯೂರಪ್ಪ ಎಂಡ್ ಸನ್ಸ್. ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಭ್ರಷ್ಟಾಚಾರದ ಸಂಬಂಧ ಬಿಎಸ್ವೈ ವಿರುದ್ದ ಕೇಸು ದಾಖಲಾಗಿದೆ.


ಯಡಿಯೂರಪ್ಪ ವಿರುದ್ದ ಲೋಕಾಯುಕ್ತದ FIR

ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿರುವುದರಿಂದ ಅವರನ್ನು ಎದುರು ಹಾಕಿಕೊಂಡು ಚುನಾವಣೆ ಎದುರಿಸುವ ಧೈರ್ಯ ವರಿಷ್ಠರಿಗೆ ಇದ್ದಂತೆ ಇರಲಿಲ್ಲ. ಹಾಗಾಗಿ, ಹಲವು ಪ್ರತಿರೋಧದ ನಡುವೆ, ಒಲ್ಲದ ಮನಸ್ಸಿನಿಂದಲೇ ಬಿಎಸ್ವೈಗೆ ಕೇಂದ್ರದ ಮಟ್ಟದಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿತ್ತು. ಜೊತೆಗೆ, ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ ಅವರಿಗೆ ವಿಶೇಷ ಗೌರವ ಆದರವೂ ದೊರಕಿತ್ತು. ಈಗ, ಲೋಕಾಯುಕ್ತದ FIR ಮುಂದಿಟ್ಟುಕೊಂಡು, ಅಮಿತ್ ಶಾ ಕಾರ್ಯತಂತ್ರ ಹಣೆಯನು ಮುಂದಾಗಿದ್ದಾರಾ ಎನ್ನುವ ಅನುಮಾನ ಬಿಎಸ್ವೈ ಬೆಂಬಲಿಗರಿಗೆ ಕಾಡುತ್ತಿದ್ದರೂ ಕಾಡಿರಬಹುದು.


ಬಿಎಸ್ವೈ ವಿರುದ್ದ FIR ಗುಮ್ಮ: ಏನಿದರ ಮರ್ಮ?

ನಾವು ಯಡಿಯೂರಪ್ಪನವರಿಗೆ ಉನ್ನತ ಸ್ಥಾನಮಾನವನ್ನೇನೋ ನೀಡಿದ್ದೆವು. ಆದರೆ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಮುಂದಿಟ್ಟುಕೊಂಡು ಹೇಗೆ ಚುನಾವಣೆ ಎದುರಿಸಲು ಸಾಧ್ಯ. ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕೂಡಾ ಒಪ್ಪುವುದಿಲ್ಲ. ಹಾಗಾಗಿ, ಲೋಕಾಯುಕ್ತ ಕೋರ್ಟಿನಿಂದ ಕ್ಲೀನ್ ಚಿಟ್ ಪಡೆದ ನಂತರ ಯಡಿಯೂರಪ್ಪನವರಿಗೆ ಅದೇ ಸ್ಥಾನಮಾನವನ್ನು ನೀಡೋಣ ಎನ್ನುವುದು ಅಮಿತ್ ಶಾ ಅವರ ಚುನಾವಣಾ ಗೇಂ ಪ್ಲ್ಯಾನ್ ಆಗಿದ್ದರೆ, ಅದು ಒಂದು ಕಲ್ಲಿನಿಂದ ಎರಡು ಟಾರ್ಗೆಟ್ ಫಿನಿಷ್ ಮಾಡಿದಂತೆ. ಒಂದು ಬಿಎಸ್ವೈ ಅವರನ್ನು ಮಾರ್ಗದರ್ಶನ ಮಂಡಳಿಗೆ ಹಾಕುವುದು, ಇನ್ನೊಂದು, ನಾವು ಭ್ರಷ್ಟಾಚಾರದ ವಿರುದ್ದ ಎನ್ನುವುದು. ದೆಹಲಿ ಇರಲಿ ಬೆಂಗಳೂರು ಇರಲಿ, ಭಾರತದ ರಾಜಕೀಯದಲ್ಲಿ ಇಂತಿಪ್ಪ ನಿರ್ಬಂಧವೇನೂ ಇಲ್ಲವಲ್ಲ. ಹಾಗಾಗಿ, ಇದೊಂದು ಆಯಾಮ ಇದ್ದರೂ ಇರಬಹುದು ಅಷ್ಟೇ..


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ