ಕಾಂಗ್ರೆಸ್ ನವರು ದೇಶ ಇಬ್ಬಾಗ ಮಾಡಿದ ಕಳಂಕ ಹೊತ್ತಿದ್ದಾರೆ. ಸ್ವಾತಂತ್ರ‍್ಯ ಬಂದ ನಂತರ ಕಾಂಗ್ರೆಸ ನಾಯಕರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಇಬ್ಬಾಗ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಬೆಳಗಾವಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ್ ರವರು, ದೇಶ ಇಬ್ಬಾಗ ಮಾಡಿದ ಪಾಪದ ಪ್ರಜ್ಞೆ ಕಾಂಗ್ರೆಸ್ ನವರಿಗೆ ಕಾಡುತ್ತಿದೆ. ಅದಕ್ಕಾಗಿ ಭಾರತ ಜೋಡೊ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಕಡೆಯಿಂದ ಭಾರತವನ್ನು ಜೋಡಿಸಲು ಆಗುವುದಿಲ್ಲ. ಕಾಂಗ್ರೆಸ್ ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಹರಿಹಾಯ್ದರು.ಭಾರತ ಅಖಂಡ ಭಾರತವಾಗಿರಬೇಕೆಂಬ ಪೂರ್ವಜರ ಕನಸಾಗಿತ್ತು. ಆ ಕನಸನ್ನು ಹುಸಿ ಮಾಡಿದವರು ಕಾಂಗ್ರೆಸ್ ಎಂದರು.
Laxmi News 24×7