ಕಾಸರಗೋಡು:ಸರಕಾರಿ ಬಸ್ ನಲ್ಲಿ ಮಂಗಳೂರು ಭಾಗದಿಂದ ಕೇರಳಕ್ಕೆ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 30 ಲಕ್ಷ ರೂ. ಗಳನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ನಿವಾಸಿ ಯಶಾದೀಪ್ ಶಾರಾದ್ ಡಬೋಟೆ (21) ಎಂಬಾತನನ್ನು ಬಂಧಿಸಲಾಗಿದೆ.
ಚಿನ್ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಂಜೇರಿಗೆ ಕೊಂಡೊಯ್ಯುವ ಹಣ ಇದೆಂದು ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಶುಕ್ರವಾರ ಬೆಳಗ್ಗೆ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಬಕಾರಿ ಅಧಿಕಾರಿ ಸಜಿತ್ ಕೆ.ಎಸ್., ಪ್ರಿವೆಂಟಿವ್ ಆಫೀಸರ್ ಗಳಾದ ಗೋಪಿ, ಸತೀಶ್, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಹಮೀದ್, ಶಮೀಲ್, ಜಾನ್ಸನ್ ಪೋಳ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Laxmi News 24×7