ಗಡಿ ವಿವಾದ ಕೆದಕಿದ ಮರಾಠಿ ಚಿತ್ರ ಬಾಯ್ಸ್ 03 ಬಿಡುಗಡೆಗೆ ಕನ್ನಡ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಮರಾಠಿ ಚಲನಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್ ಹಾಕಲಾಗಿದೆ.
ಹೌದು ಮಹಾರಾಷ್ಟ್ರದಲ್ಲಿ ಮರಾಠಿ ಚಲನಚಿತ್ರ “ಬಾಯ್ಸ್ 03” ಚಿತ್ರ ಇವತ್ತು ಬಿಡುಗಡೆಯಾಗಿದೆ. ಈ ಚಿತ್ರವನ್ನು ಬೆಳಗಾವಿ ಮತ್ತು ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತ್ತು. ಅಲ್ಲದೇ ನಗರ ಪೆÇಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದ ಕರವೇ ಮುಖಂಡರು ಬೆಳಗಾವಿಯಲ್ಲಿ ಮರಾಠಿ ಬಾಯ್ಸ್ ಚಿತ್ರ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದರು.
ಹೀಗಾಗಿ ಇಂದು ಮಹಾರಾಷ್ಟ್ರ ಸೇರಿ ವಿವಿಧೆಡೆ ಬಿಡುಗಡೆ ಆಗುತ್ತಿರುವ ಬಾಯ್ಸ್ 3 ಮರಾಠಿ ಚಿತ್ರ ಬೆಳಗಾವಿಯಲ್ಲಿ ತೆರೆ ಕಾಣುತ್ತಿಲ್ಲ. ಕರ್ನಾಟಕ ಪೆÇಲೀಸರಿಗೆ, ಕನ್ನಡ ಭಾμÉಗೆ ಅಪಮಾನವಾಗುವ ರೀತಿ ಚಿತ್ರದಲ್ಲಿ ಸಂಭಾಷಣೆಗಳು ಇವೆ. ಚಿತ್ರದ ಟ್ರೇಲರ್‍ನಲ್ಲಿರುವ ದೃಶ್ಯ ನೋಡಿದ ಕನ್ನಡಿಗರು ಕೆಂಡಾಮಂಡಲವಾಗಿದ್ದು, ಇದೇ ದೃಶ್ಯ ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಈ ಚಿತ್ರದಲ್ಲಿ ಕರ್ನಾಟಕದ ಪೆÇಲೀಸ್ ಠಾಣೆಗೆ ಆಗಮಿಸಿದ ದೃಶ್ಯದಲ್ಲಿ ವಿವಾದಿತ ಡೈಲಾಗ್ ಇದೆ. ಈ ದೃಶ್ಯದಲ್ಲಿ ಮರಾಠಿ ಮಾತನಾಡಬೇಡಿ, ಕನ್ನಡ ಇಲ್ಲ ಇಂಗ್ಲಿμï ಮಾತನಾಡಿ ಎನ್ನುವ ಅಧಿಕಾರಿಗೆ, ಪ್ರತಿಯಾಗಿ ಚಿತ್ರದಲ್ಲಿ ಇರುವ ಒಂದು ಡೈಲಾಗ್‍ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ನಿಮಗೆ ನಿಮ್ಮ ಕನ್ನಡ ಭಾμÉ ಮೇಲೆ ಅಭಿಮಾನವಿದ್ದರೆ, ನಮಗೂ ನಮ್ಮ ಮರಾಠಿ ಭಾμÉ ಮೇಲೆ ಅಭಿಮಾನವಿದೆ. ಅಷ್ಟಕ್ಕೂ ಮರಾಠಿ ಭಾμÉ ಅಭಿಮಾನ ಬೆಳಗಾವಿಯಲ್ಲಿ ತೋರಿಸದಿದ್ರೆ ಮತ್ತೆಲ್ಲಿ ತೋರಿಸಬೇಕು ಎಂಬ ಡೈಲಾಗ್ ಇದೆ. ಹೀಗೆ ವಿವಾದಾತ್ಮಕ ಡೈಲಾಗ್ ಇರುವ ಚಿತ್ರದ ಬಿಡುಗಡೆಗೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿದೆ.