ಬೆಳಗಾವಿ: ಜಿಲ್ಲೆಯಲ್ಲಿ ಪೂರ್ಣ ಪ್ರಮಾಣ ಮನೆ ಬಿದ್ದವರಿಗೆ 24 ಗಂಟೆ ಒಳಗೆ ಪರಿಹಾರದ ಹಣ ಕೊಡಲಾಗುತ್ತಿದೆ. ರಾಜ್ಯದಲ್ಲೇ ಇದು ಅತ್ಯಂತ ವೇಗವಾಗಿ ನಡೆದ ಕೆಲಸ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, 2019ರಲ್ಲಿ 46,959 ಮನೆಗಳಿಗೆ ₹ 828.67 ಪರಿಹಾರ ಕೊಟ್ಟಿದ್ದೇವೆ. 2019ರಲ್ಲಿ₹ 120.05 ಕೋಟಿ ಕೊಟ್ಟಿದ್ದೇವೆ. ಇಷ್ಟು ಪ್ರಮಾಣದಲ್ಲಿ ಪರಿಹಾರವನ್ನು 75 ವರ್ಷದಲ್ಲಿ ಯಾರೂ ಒಂದು ಜಿಲ್ಲೆಗೆ ಕೊಟ್ಟಿಲ್ಲ. ಮೂರು ವರ್ಷದಲ್ಲೇ ಬೆಳಗಾವಿಗೆ ₹ 1726 ಕೋಟಿ ನೀಡಿದ್ದೇವೆ ಎಂದರು.
ಹೊಲಕ್ಕೆ ಹೋಗಿ ಸಮೀಕ್ಷೆ ಮಾಡಲು ಆಗುತ್ತಿಲ್ಲ ಹೀಗಾಗಿ ಬೆಳೆ ಪರಿಹಾರ ವಿಳಂಬವಾಗುತ್ತಿದೆ. ಆದರೆ, ಅಂದಾಜು ಮಾಡಿದ್ದೇವೆ ಎಂದರು.