ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆ ಹಾಗೂ ಘಟಪ್ರಭಾದಿಂದ ಹೆಚ್ಚು ನೀರು ಹರಿದು ಬರುತ್ತಿರುವ ಕಾರಣ ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ಅಪಾರಪ್ರಮಾಣದ ನೀರು ಹರಿದುಬರುತ್ತಿದೆ.
ಜಲಾಶಯದ 26 ಕ್ರಸ್ಟ್ ಗೇಟ್ಗಳ ಮೂಲಕ ಸೋಮವಾರ ಸಂಜೆಯಿಂದ 1,25000 ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.
ಕಳೆದ 20 ದಿನಗಳಿಂದ ಶಾಂತವಾಗಿದ್ದ ಕೃಷ್ಣಾನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು. ಇದು ತಾತ್ಕಾಲಿ ಎನ್ನಲಾಗುತ್ತಿದೆ. ನಿನ್ನೆ ಬೆಳಗ್ಗೆ 16 ಗೇಟಗಳ ಮೂಲಕ ನೀರನ್ನ ಹೊರಬಿಡಲಾಗುತ್ತಿತ್ತು. ನಿನ್ನೆ ಸಂಜೆಯಿಂದ ಹೆಚ್ಚಿನ ಪ್ರವಾಣದ ನೀರು ಹರಿದು ಬಂದ ಹಿನ್ನೆಲೆ 26 ಗೇಟ್ಗಳನ್ನ ತೆರೆಯಲಾಗಿದೆ. ಸೋಮವಾರ ಸಂಜೆ ವೇಳೆ ಜಲಾಶಯಕ್ಕೆ 77,000 ಕುಸ್ಸೆಕ್ ಇದ್ದ ಒಳಹರಿವು ಇಂದು ಬೆಳಗ್ಗೆ 94,304 ಕೂಸ್ಸೆಕ್ ದಾಟಿದೆ.ಕಲ್ಲೋಲ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 62,500 ಕೂಸ್ಸೆಕ್ ಇದೆ, ಘಟಪ್ರಭಾ ನದಿಯಿಂದ 52,000 ಕುಸ್ಸೆಕ್ ನೀರು ನದಿಗೆ ಸೇರುತ್ತಿದೆ. ಹೀಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರದಲ್ಲಿ 6 ರಿಂದ 10 ಟಿಎಮಸಿ ಅಡಿಯಷ್ಟು ಕೊರತೆಯಿಟ್ಟುಕೊಳ್ಳಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಒಳಹರಿವಿಗಿಂತ ಹೊರಹರಿವಿನಲ್ಲಿ ನೀರನ್ನ ಹೆಚ್ಚಿಸಲಾಗಿದೆ. 519.60 ಮೀಟರ್ ಎತ್ತರದ ಜಲಾಶಯದಲ್ಲಿ ಸದ್ಯ 519.54 ಮೀಟರ್ ನೀರು ಸಂಗ್ರಹವಾಗಿದೆ.