Breaking News

ಸಿದ್ದಾರ್ಥ ಹೆಗ್ಡೆ ಕನಸಿನ ಕಾಫಿ ಡೇ ಸಾಲ ತಗ್ಗಿಸಿದ ಗಟ್ಟಿಗಿತ್ತಿ ಮಾಳವಿಕಾ

Spread the love

ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ ದಿನದಿನಕ್ಕೆ ಕುಸಿಯುತ್ತಿದೆ, ಷೇರುಪೇಟೆಯಲ್ಲಿ ಕಾಫಿ ಡೇ ಷೇರುಗಳು ನೆಲಕಚ್ಚಿವೆ ಎಂಬ ಕಹಿ ಸುದ್ದಿ ನಡುವೆ, ಸಾಲದ ಹೊರೆ ತಗ್ಗಿರುವ ಸಿಹಿ ಸುದ್ದಿ ಬಂದಿದೆ.

 

ವಿಜಿ ಸಿದ್ಧಾರ್ಥ ಅವರು ಸ್ಥಾಪಿಸಿದ್ಧ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಮತ್ತು ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕೋ ಲಿಮಿಟೆಡ್‌ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರಿಗೆ ಮಂಡಳಿಯು ಸಂಸ್ಥೆಯನ್ನು ನೋಡಿಕೊಳ್ಳುವ ಮಹತ್ವದ ಹುದ್ದೆಗೆ ನೇಮಿಸಿದ ಬಳಿಕ ಚಿತ್ರಣ ಬದಲಾಗಿದೆ.

2019ರ ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿತ್ತು. ಸಿದ್ದಾರ್ಥ ಅಗಲಿಕೆ ಬಳಿಕ ಕಂಪೆನಿಗೆ ಮರುಜೀವ ನೀಡುವ ಪ್ರಯತ್ನ ನಡೆಯುತ್ತಿದ್ದು, ಕಳೆದುಕೊಂಡಿರುವ ಮೌಲ್ಯವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯಲ್ಲಿ ಪ್ರಮುಖ ನೇಮಕಗಳನ್ನು ಮಾಡಲಾಗಿತ್ತು.

ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಕಾಫಿ ಡೇ ಸಂಸ್ಥೆ ಸಲ್ಲಿಸಿದ ವರದಿ ಪ್ರಕಾರ 1,810 ಕೋಟಿ ರು ತಲುಪಿದೆ. ಅಂದರೆ ಸುಮಾರು 7,214 ಕೋಟಿ ರು ಇದ್ದ ಸಾಲದ ಹೊರೆ ತಗ್ಗಿದ್ದು 5000 ಕೋಟಿ ರು ಸಾಲದ ಹೊರೆಯನ್ನು ಇಳಿಸುವಲ್ಲಿ ಮಾಳವಿಕಾ ಹಾಗೂ ತಂಡ ಯಶ ಕಂಡಿದೆ. ಈ ಕುರಿತಂತೆ ವಾಟ್ಸಾಪ್, ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆಯ ಸಂದೇಶಗಳು ಹರಿದಾಡಿದ್ದು, ಯಥಾವತ್ತಾಗಿ ಈ ಕೆಳಗೆ ನೀಡಲಾಗಿದೆ.

ನೇತ್ರಾವತಿ ನದಿಗೆ ಹಾರಿ ಸಾಯುವ ಮುನ್ನ ಹೀಗೊಂದು ಸಾಲು ಬರೆದಿದ್ದಾರೆ

“ನನ್ನ ವ್ಯಾಪಾರ ತಂತ್ರಗಳಲ್ಲಿ ನಾನು ವಿಫಲನಾಗಿದ್ದೇನೆ”

7,000 ಕೋಟಿ ಸಾಲದ ರಾಶಿಯಿಂದ ಹೊರಬರುವುದೊಂದೇ ದಾರಿ ಎಂದು ಭಾವಿಸಿ ಕುಟುಂಬವನ್ನೇ ಬಿಟ್ಟು ಶಾಶ್ವತವಾಗಿ ಓಡಿಹೋದರು. ನಮಗೆಲ್ಲರಿಗೂ ತಿಳಿದಿರುವ ಭಾರತದ ಅತಿದೊಡ್ಡ ಕಾಫಿ ಶಾಪ್ ಸರಣಿ ಕೆಫೆ ಡೇ ಕಾಫಿಯ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಕಥೆ ಮೇಲಿನದು.

ಸಿದ್ಧಾರ್ಥನ ಮರಣದ ನಂತರ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಅವರ ಬಡ ಪತ್ನಿ ಮಾಳವಿಕಾ ಹೆಗಡೆ ಅವರನ್ನು ಅನೇಕರು ಸಹಾನುಭೂತಿಯಿಂದ ನೋಡಿರಬಹುದು.

“ದುರದೃಷ್ಟ ಮಹಿಳೆ !! ದೊಡ್ಡ ಸಾಲಗಾರನ ಹೆಂಡತಿ”

ಇನ್ನೂ ಹಲವರು, “ಅಯ್ಯೋ, ನಾನು ಅವಳಿಗೆ ಏನು ಮಾಡಲಿ? ಮೂರು ದಶಕಗಳಲ್ಲಿ, ಸಿದ್ಧಾರ್ಥ 7000 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾನೆ.

ಸಿಇಓ ಖುರ್ಚಿಯಲ್ಲಿ ಕುಳಿತಾಗ ಅವಳ ಕಣ್ಣಾಲಿಗಳು ತುಂಬಿ ಬಂದಿರಬೇಕು… ತನ್ನ ದುಃಸ್ಥಿತಿಯನ್ನು ನೆನೆದುಕೊಂಡಳು.

ಗಂಡನನ್ನು ಕಳೆದುಕೊಂಡ ದುಃಖವನ್ನು ನೆನಪಿಸಿಕೊಂಡರೆ ಅವರ ತೂಕ ಎಷ್ಟು ??

ಆದರೆ ಇವು ಅವಳ ಜೀವನದಲ್ಲಿ ಕೇವಲ ಮುಳ್ಳಿನ ಹಾದಿಗಳಾಗಿದ್ದವು.

ಆದರೆ ಕೇವಲ ಎರಡೇ ವರ್ಷದಲ್ಲಿ 5500 ಕೋಟಿ ಸಾಲ ತೀರಿಸಿ ಸೋತವರ ಮೇಲೆ ವಿಜಯ ಪತಾಕೆ ಹಾರಿಸಿದ ಸಿದ್ಧಾರ್ಥನ ನಿಜವಾದ ಹೀರೋ ಇವರೇ. ಬಹುಶಃ ಸಿದ್ಧಾರ್ಥ ತನ್ನ ಹೆಂಡತಿಯ ಸಾಮರ್ಥ್ಯವನ್ನು ಅರಿತುಕೊಂಡಿರಲಿಲ್ಲ.

ನಮ್ಮ ಸುತ್ತ ಮುತ್ತ ಕಣ್ಣು ಹಾಯಿಸಿದರೆ ಇಂತಹ ಸಾವಿರ ಮಾಳವಿಕಾ ಹೆಗಡೆ ಕಾಣಸಿಗುತ್ತಾರೆ. ಖಾಲಿತನದಿಂದ ಅದ್ಭುತಗಳನ್ನು ಮಾಡುವ ಬಹಳಷ್ಟು ಮಹಿಳೆಯರು … ಬಹಳಷ್ಟು ಕುಟುಂಬಗಳಿಗೆ ಬೆನ್ನೆಲುಬಾಗಿರುವ ಮಹಿಳೆಯರು. ಮಹಿಳೆಯರು ಯಾವುದೇ ಅಧಿಕಾರದ ಸ್ಥಾನವನ್ನು ಹೊಂದಿಲ್ಲ ಎಂದು ಇನ್ನೂ ನಂಬುವ ಕೀಳುಮಟ್ಟದವರಿಗೆ ಅವರು ಉತ್ತರ.

ಇದನ್ನೇ ಹೆಣ್ಣಿನ ಶಕ್ತಿ ಎನ್ನಬೇಕು.

ನನ್ನದಲ್ಲದ ಬರಹ


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ