Breaking News

ಸೆ.26 ರಿಂದ ಅ.10ರವರೆಗೆ ದಸರಾ ರಜೆ ನೀಡಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚನೆ

Spread the love

ಸೆ.12: ನವರಾತ್ರಿ ಆಚರಣೆಯ ಸಲುವಾಗಿ ಸೆ. 26ರಿಂದ ಅ.10ರವರೆಗೆ ಶಾಲಾ ಮಕ್ಕಳಿಗೆ ರಜೆ ನೀಡಲು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶಿಸಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

ಸೆ.26ರಿಂದ ನವರಾತ್ರಿ ಹಬ್ಬ ಪ್ರಾರಂಭವಾಗುತ್ತಿದೆ. ಮಂಗಳೂರು ದಸರಾ, ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಥಬೀದಿ ಶಾರದಾ ಮಹೋತ್ಸವ, ಮಂಗಳಾದೇವಿ ದೇವಸ್ಥಾನ ಸಹಿತ ನಗರದೆಲ್ಲೆಡೆ ಅತ್ಯಂತ ಸಂಭ್ರಮದಲ್ಲಿ ದಸರ ಹಬ್ಬವನ್ನು ಆಚರಿಸಲಾಗುತ್ತದೆ.

ಶಾಲಾ ಮಕ್ಕಳ ರಜೆಯನ್ನು ಹಬ್ಬದ ಸಂದರ್ಭದಲ್ಲೇ ನೀಡುವಂತೆ ಮನವಿ ಮಾಡಿದ್ದೆ. ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ. ಅ.2ರ ಗಾಂಧಿ ಜಯಂತಿಯ ಆಚರಣೆ ಮಾಡುವ ಷರತ್ತಿನೊಂದಿಗೆ ರಜೆ ನೀಡಲು ಸೂಚಿಸಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಹುದಲಿ ಗ್ರಾಮಕ್ಕೆ ಆಗಮಿಸಿ ಗಾಂಧೀಜಿ 7 ದಿನಗಳ ಕಾಲ ವಾಸ್ತವ್ಯ ಹೂಡಿದ ನೆನಪುಗಳನ್ನು ಸ್ಮರಿಸಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

Spread the love ನಮ್ಮ ಕ್ಷೇತ್ರದ ಹೆಮ್ಮೆ ಮಹಾತ್ಮಾ ಗಾಂಧೀ – ಗಂಗಾಧರರಾವ್ ಸ್ಮಾರಕ ಭವನಕ್ಕೆ ಇಂದು ಭೇಟಿ ನೀಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ