Breaking News

ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

Spread the love

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಆರಂಭವಾದ ಗಲಾಟೆಯು ಯುವಕನ(Young Man) ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ(Belagavi) ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದ ನಿವಾಸಿ ಅರ್ಜುನಗೌಡ ಪಾಟೀಲ್ (20) ಕೊಲೆಯಾದ ಯುವಕನಾಗಿದ್ದಾನೆ. ನಿನ್ನೆ ಸಂಜೆ ನಡೆದ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಮತ್ತೊಂದು ಗುಂಪಿನ ಯುವಕನೊಬ್ಬ ಅರ್ಜುನಗೌಡನಿಗೆ ಚಾಕು ಇರಿದಿದ್ದಾರೆ. ಈ ವೇಳೆ ಅರ್ಜುನಗೌಡ ಕುಸಿದು ನೆಲಕ್ಕೆ ಬೀಳುತ್ತಿದ್ದಂತೆ ಹಂತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೊಲೆಯಾದ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.


Spread the love

About Laxminews 24x7

Check Also

ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ: 100 ವಿಕಲಚೇತನರಿಗೆ ಪದವಿ ಪ್ರಧಾನ

Spread the loveವಿಕಲಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ