ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದುವು 10 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಆದರೆ ಇದಕ್ಕಿಂತಲೂ ದೊಡ್ಡ ಬೆಲೆಗೆ ಕುಂಬಳಕಾಯಿ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ.
ಇಡುಕ್ಕಿ(ಕೇರಳ): ಒಂದು ಕುಂಬಳಕಾಯಿಯ ಬೆಲೆ 47 ಸಾವಿರ ರೂಪಾಯಿ ಅಂದರೆ ಯಾರೂ ನಂಬುವುದಿಲ್ಲ.
ಆದರೂ ಇದು ಸತ್ಯ. ಕುಂಬಳಕಾಯಿಯೊಂದು ಬರೋಬ್ಬರಿ 47 ಸಾವಿರ ರೂಪಾಯಿಗೆ ಮಾರಾಟವಾಗಿದ್ದು ನಿಜ. ಇಡುಕ್ಕಿಯ ಗುಡ್ಡ ಪ್ರದೇಶದಲ್ಲಿರುವ ಚೆಮ್ಮನ್ನಾರ್ ಎಂಬಲ್ಲಿ ನಡೆದ ಓಣಂ ಹಬ್ಬದ ಹರಾಜಿನಲ್ಲಿ 5 ಕೆಜಿ ತೂಕದ ಕುಂಬಳಕಾಯಿಯೊಂದು 47 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಇದು ಈ ಬಾರಿಯ ಓಣಂ ಹಬ್ಬದ ವಿಶೇಷತೆಯಾಗಿದೆ.
ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದುವು 10 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಆದರೆ ಇದಕ್ಕಿಂತಲೂ ದೊಡ್ಡ ಬೆಲೆಗೆ ಕುಂಬಳಕಾಯಿ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಕುಂಬಳಕಾಯಿಗೆ ಈ ಪರಿ ಬೆಲೆ ಬಂದಿರುವುದನ್ನು ನೋಡಿ ಇಲ್ಲಿನ ಹರಾಜಿನ ಬಗ್ಗೆ ಜನರಲ್ಲಿ ವಿಪರೀತ ಕುತೂಹಲ ಮೂಡಿದೆ. ಇನ್ನೂ ವಿಚಿತ್ರ ಏನೆಂದರೆ ಈ ಕುಂಬಳಕಾಯಿಯನ್ನು ಹಬ್ಬದ ಸಂಘಟಕರಿಗೆ ಉಚಿತವಾಗಿ ನೀಡಿದ್ದರು ಎಂಬುದು.