ಬೆಂಗಳೂರು: ಮಳೆ ಅನಾಹುತಕ್ಕೆ ಸಾರ್ವಜನಿಕರ ಆಕ್ರೋಶ ಮತ್ತು ಮತ್ತೊಂದೆಡೆ ಸರ್ಕಾರಕ್ಕೆ ಮೋಹನ್ ದಾಸ್ ಪತ್ರ ಬರೆದ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಸಿಎಂ ಬೊಮ್ಮಾಯಿಗೆ ಖಡಕ್ ಸೂಚನೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆ ಅನಾಹುತ ಸರಿಪಡಿಸಲು ವಿಶೇಷ ಗಮನ ಹರಿಸಿ, ಬೆಂಗಳೂರು ಮಳೆ ಸಮಸ್ಯೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಗ್ರೀನ್ ಸಿಟಿಯ ಬಗ್ಗೆ ಎಲ್ಲಾ ಕಡೆ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ಹಾಗೂ ಪಕ್ಷದ ಮೇಲೆ ಇದು ದೊಡ್ಡ ಪರಿಣಾಮ ಬೀರಲಿದೆ. ಮೊದಲು ಇದನ್ನು ನಿಭಾಯಿಸಿ ಎಂದು ಹೈಕಮಾಂಡ್ ಸೂಚಿಸಿದೆ.
ಬೆಂಗಳೂರು ಪ್ರವಾಹವನ್ನ ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಮಳೆ ಸಮಸ್ಯೆಗೆ ಕೂಡಲೇ ಪರಿಹಾರ ರೂಪಿಸಬೇಕು. ಇದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಮೂಡಿದೆ. ಇದೆಲ್ಲದರ ಮಧ್ಯೆ ಬೆಂಗಳೂರು ಬಿಜೆಪಿ ಶಾಸಕರಿಂದಲೂ ಸಿಎಂಗೆ ಮನವಿ ಪತ್ರಗಳು ಸಾಕಷ್ಟು ಬಂದಿವೆ.
Laxmi News 24×7