ಬೆಳಗಾವಿ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಪಿಲೇಶ್ವರ ಹೊಂಡಕ್ಕೆ ರಸ್ತೆಯ ಮೇಲೆ ಹರಿಯುತ್ತಿದ್ದ ನೀರು ನುಗ್ಗಿದ್ದು ಗಣೇಶ ವಿಸರ್ಜನೆಗೆ ತೊಂದರೆಯಾಗುತ್ತಿದೆ. ಮಳೆ ನೀರಿನೊಂದಿಗೆ ಡ್ರೆöÊನೇಜ್ ನೀರು ಹೊಂಡದೊಳಕ್ಕೆ ನುಗ್ಗಿದ್ದು ಪಾಲಿಕೆ ಅಧಿಕಾರಿಗಳು ಅದನ್ನು ಸ್ವಚ್ಛಗೊಳಿಸಿ ಶುದ್ಧ ನೀರನ್ನು ಹೊಂಡಕ್ಕೆ ತುಂಬಿಸಿದ್ದಾರೆ.
ಬೆಳಗಾವಿಯಲ್ಲಿ ಸೆಪ್ಟೆಂಬರ್ ೯ರಂದು ಗಣೇಶ ವಿಸರ್ಜನೆ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಆದರೆ ನಗರದ ಕಪಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಪಿಲೇಶ್ವರ ಹೊಂಡದಲ್ಲಿಯೇ ಸಾಂಪ್ರದಾಯಿಕ ಗಣೇಶ ವಿಸರ್ಜನೆಯನ್ನು ನೆರವೇರಿಸಲಾಗುತ್ತಿದೆ. ಆದರೆ ನಿನ್ನೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯ ಮೇಲೆಲ್ಲ ನೀರು ಹರಿದು ಹೊಂಡಕ್ಕೆ ಸೇರಿದೆ. ಇದರಿಂದ ಸಾರ್ವಜನಿಕರು ಚರಂಡಿ ನೀರೆಲ್ಲ ಹೊಂಡಕ್ಕೆ ಸೇರಿದೆ. ಹಾಗಾಗಿ ಗಣೇಶ ವಿಸರ್ಜನೆ ವೇಳೆ ಗಲೀಜು ನೀರಲ್ಲಿ ಗಣೇಶ ವಿಸರ್ಜನೆ ಮಾಡಲಾಗುವುದಿಲ್ಲ. ಹಾಗಾಗಿ ಕೂಡಲೇ ಹೊಂಡದಿಂದ ನೀರನ್ನು ಹೊರಹಾಕಬೇಕೆಂದು ಆಗ್ರಹಿಸಿದ್ದರು.