Breaking News

ತ್ಯಾಗರ್ತಿ: ಒಂದೇಕಡೆ ಗಣಪತಿ ಪ್ರತಿಷ್ಠಾಪನೆ

Spread the love

ತ್ಯಾಗರ್ತಿ: ಸರ್ವಧರ್ಮಿಯರನ್ನು ಹೊಂದಿರುವ ತ್ಯಾಗರ್ತಿ ಗ್ರಾಮ ಸುಮಾರು 5,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಸಂಘಟಿಸಿ ಮಾದರಿಯಾಗಿದೆ.

ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಅಂಬೇಡ್ಕರ್ ಸಂಘ, ಮುಕ್ಕುಪ್ಪೆ ಸರ್ಕಲ್, ಕಾಗೋಡು ತಿಮ್ಮಪ್ಪ ವೃತ್ತ, ಬನ್ನಿಕಟ್ಟೆ, ಮಾರಿಕಾಂಬಾ ತವರು ಮನೆ ಹಾಗೂ ಮಾರಿಕಾಂಬಾ ದೇವಸ್ಥಾನ ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು.

 

ಗ್ರಾಮದ ಹಿರಿಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಚರ್ಚಿಸಿ ಎಲ್ಲರೂ ಸೇರಿ ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪಿಸಬೇಕು ಎಂದು ತೀರ್ಮಾನ ಕೈಗೊಂಡರು. ಅದರಂತೆ ಐದಾರು ವರ್ಷಗಳಿಂದ ಸಾರ್ವಜನಿಕವಾಗಿ ಒಂದೇ ಕಡೆ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೋವಿಡ್‌ ಕಾರಣದಿಂದ ಎರಡು ವರ್ಷ ಈ ಸಂಭ್ರಮಕ್ಕೆ ತಡೆ ಉಂಟಾಗಿತ್ತು. ಸೆಪ್ಟೆಂಬರ್‌ 7ರಂದು ಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಸರ್ವಧರ್ಮಿಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಅಂದು ಜನಪದ ಕಲಾತಂಡಗಳಿಂದ ವಿವಿಧ ವೇಷಭೂಷಣಗಳ ಪ್ರದರ್ಶನದೊಂದಿಗೆ ಗ್ರಾಮದ ಪ್ರತಿ ಬೀದಿಗಳಲ್ಲೂ ಮೆರವಣಿಗೆ ನಡೆಯಲಿದೆ. ಸಿಡಿಮದ್ದು ಪ್ರದರ್ಶನದೊಂದಿಗೆ ತ್ಯಾಗರ್ತಿಯ ಅಗಸರ ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ